ಬಾಗಲಕೋಟೆ: ಎರಡು ಕೋಮಿನ ಯುವಕರ ಮಧ್ಯೆ ಗಲಾಟೆ ಆಗಿದೆ. ಈ ಗಲಾಟೆಯಲ್ಲಿ ಹಿಂದೂ ಯುವಕರ ಮೇಲೆ ಮುಸ್ಲಿಂ ಯುವಕರಿಂದ ಚೂರಿ ಇರಿತವೂ ನಡೆದು ಹೋಗಿದೆ. ಇದರಿಂದ ಮೂವರು ಯುವಕರು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೂ ದಾಖಲಾಗಿದ್ದಾರೆ. ಬಾಗಲಕೋಟೆ ಬದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ಈ ಘಟನೆ ನಡೆದಿದೆ.
ಹೌದು. ಹಿಂದೂ ಯುವಕರಾದ ಅರುಣ್, ಲಕ್ಷ್ಮಣ ಎಂಬ ಯುವಕರಿಗೆ ಚೂರಿ ಇರಿಯಲಾಗಿದೆ. ಘಟನೆಯಲ್ಲಿ ಯಮನೂರು ಎಂತಾತನಿಗೆ ಗಾಯವಾಗಿದೆ.
ಘಟನೆ ಬೆನ್ನಲ್ಲಿಯೇ ಹಿಂದೂಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಆಸ್ಪತ್ರೆಗೆ ಭೇಟಿ ಕೊಟ್ಟಿದ್ದಾರೆ. ಚೂರಿ ಇರಿದವರನ್ನ ಬಂಧಿಸಲೇಬೇಕು ಎಂದು ಆಗ್ರಹಿಸಿದ್ದಾರೆ.
PublicNext
07/07/2022 12:57 pm