ಜೈಪುರ : ಉದಯಪುರದಲ್ಲಿ ಕನ್ಹಯ್ಯಲಾಲ್ ರನ್ನು ಭೀಕರವಾಗಿ ಶಿರಚ್ಛೇದ ಮಾಡಿದ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಶನಿವಾರ ಎನ್ ಐಎ ಕೋರ್ಟ್ ಗೆ ಹಾಜರುಪಡಿಸಲಾಯಿತು. ಈ ವೇಳೆ ಕೋರ್ಟ್ ನಲ್ಲಿಯೇ ವಕೀಲರಿಂದಲೇ ಭೀಕರ ಕೌರ್ಯದಲ್ಲಿ ಭಾಗಿಯಾದ ರಿಯಾಜ್ ಅಟ್ಟಾರಿ, ಮೊಹಮದ್ ಗೌಸ್, ಮೊಹ್ಶಿನ್ ಹಾಗೂ ಆಸಿಫ್ ಮೇಲೆ ಹಲ್ಲೆ ಮಾಡಲಾಗಿದ್ದು ವಿಡಿಯೋ ವೈರಲ್ ಆಗಿದೆ.
ಪ್ರವಾದಿ ಮೊಹಮದ್ ಪೈಗಂಬರ್ ಕುರಿತಾಗಿ ನೂಪುರ್ ಶರ್ಮ ಹೇಳಿದ್ದ ಹೇಳಿಕೆಯನ್ನು ಬೆಂಬಲಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ ಕನ್ಹಯ್ಯಲಾಲ್ ನನ್ನು ಭೀಕರವಾಗಿ ಶಿರಚ್ಛೇಧ ಮಾಡಲಾಗಿತ್ತು.
ಸದ್ಯ ಆರೋಪಿಗಳ ವಿಚಾರಣೆಯ ವೇಳೆ ಕೋರ್ಟ್, ಇನ್ನೂ 10 ದಿನಗಳ ಕಾಲ ರಿಮಾಂಡ್ ನೀಡಲು ಒಪ್ಪಿಕೊಂಡಿದೆ. ಅದರಂತೆ, ನಾಲ್ವರು ಆರೋಪಿಗಳ ಪೈಕಿ ನೇರವಾಗಿ ಹತ್ಯೆಯಲ್ಲಿ ಭಾಗಿಯಾದ ಮೊಹಮದ್ ಗೌಸ್, ರಿಯಾಜ್ ಅಟ್ಟಾರಿ ಹಾಗೂ ಹತ್ಯೆಗೆ ಸಹಾಯ ಮಾಡಿದ ಮೊಹ್ಶಿನ್ ಹಾಗೂ ಆಸಿಫ್ ರನ್ನು ವ್ಯಾನ್ ನತ್ತ ಕರೆದುಕೊಂಡು ಹೋಗುತ್ತಿದ್ದ ವೇಳೆ ವಕೀಲರು ಹಲ್ಲೆ ಮಾಡಿದ್ದಾರೆ.
ಭಾರೀ ಜನಸ್ತೋಮದ ನಡುವೆ ಅವರನ್ನು ಕರೆದುಕೊಂಡು ಬರುವ ವೇಳೆ, ಎಳೆದಾಡಿ, ಹಲ್ಲೆ ಮಾಡಿದ್ದಾರೆ.
PublicNext
02/07/2022 05:48 pm