ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಕ್ರಮ ಸಂಬಂಧ,ಜೋಡಿ ಕೊಲೆ : ಮೂವರಿಗೆ ಗಲ್ಲು ಶಿಕ್ಷೆ

ಚಿಕ್ಕೋಡಿ: ಚಿಕ್ಕೋಡಿಯ ಏಳನೇ ಹೆಚ್ಚುವರಿ ನ್ಯಾಯಾಲಯ ಅಕ್ರಮ ಸಂಬಂಧ ಹೊಂದಿದ್ದ ಜೋಡಿ ಕೊಲೆ ಕೇಸ್ ಗೆ ಸಂಬಂಧಿಸಿದಂತೆ ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸಿದೆ.ಬಾಬು ಆಕಳೆ, ನಾಗಪ್ಪ ಆಕಳೆ, ಭೀಮಪ್ಪ ಆಕಳೆ ಎಂಬವರು ಗಲ್ಲು ಶಿಕ್ಷೆಗೆ ಗುರಿಯಾದ ಆರೋಪಿಗಳು. ಬಸವರಾಜ್ ಬುರ್ಜಿ ಹಾಗೂ ಸಂಗೀತಾ ಆಕಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇವರಿಗೆ ಶಿಕ್ಷೆ ನೀಡಲಾಗಿದೆ.

ಬಾಬು ಆಕಳೆ ಪತ್ನಿ ಸಂಗೀತಾ ಜತೆ ಬಸವರಾಜ್ ಅಕ್ರಮ ಸಂಬಂಧ ಹೊಂದಿದ್ದ ಎಂದು 2013 ರಲ್ಲಿ ಚಿಕ್ಕೋಡಿ ತಾಲೂಕಿನ ಕೆ ಕೆ ಮಮದಾಪೂರ ಗ್ರಾಮದಲ್ಲಿ ನಡೆದಿದ್ದ ಈ ಕೊಲೆಗೆ ಸಂಬಂಧಿಸಿದಂತೆ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Edited By : Nirmala Aralikatti
PublicNext

PublicNext

15/06/2022 08:40 pm

Cinque Terre

67.48 K

Cinque Terre

16