ಬೆಂಗಳೂರು : ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ 50 ಲಕ್ಷ ಗಳ ಪರಿಹಾರ ನೀಡುವಂತೆ ಬೆಂಗಳೂರಿನ ಕನ್ಸ್ಯೂಮರ್ ಕೋರ್ಟ್ ನಲ್ಲಿ ಕ್ಯಾಡ್ಬರಿ ಡೈರಿ ಮಿಲ್ಕ್ ಚಾಕಲೇಟ್ ಕಂಪನಿಯ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ಹೌದು ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್ ನಿವಾಸಿ ಮುಖೇಶ್ ಕುಮಾರ್ ಕೇಡಿಯಾ 2016ರಲ್ಲಿ ಎಚ್ ಎಸ್ ಆರ್ ಲೇಔಟ್ ನ ಸೂಪರ್ ಮಾರ್ಕೆಟ್ ನಲ್ಲಿ 89 ರೂ. ಕೊಟ್ಟು ಕ್ಯಾಡ್ಬರಿ ಕಂಪನಿಯ ಎರಡು ಡೈರಿ ಮಿಲ್ಕ್ ಚಾಕಲೇಟ್ ಖರೀದಿಸಿದ್ದರು.
ಕೆಲವು ದಿನಗಳ ನಂತರ ಮುಖೇಶ್ ಅವರು ಡೈರಿಮಿಲ್ಕ್ ಪ್ಯಾಕೆಟ್ ಗಳನ್ನು ತೆಗೆದಾಗ ಚಾಕಲೇಟ್ ನಲ್ಲಿ ಹುಳಗಳು ಕಂಡು ಬಂದಿತ್ತು.
ಕೂಡಲೇ ಇದರ ಬಗ್ಗೆ ಕ್ಯಾಡ್ಬರಿ ಕಂಪನಿಯ ಕಸ್ಟಮರ್ ಹೆಲ್ಪ್ ಲೈನ್ ಗೆ ಕರೆ ಮಾಡಿ ದೂರನ್ನು ನೀಡುತ್ತಾರೆ ಆದರೆ ಕಂಪನಿ ಈ ಬಗ್ಗೆ ತಲೆಕೆಡಿಸಿಕೊಳ್ಳಲ್ಲ.ಇದರಿಂದ ಕೋಪಗೊಂಡ ಮುಖೇಶ್ ಬೆಂಗಳೂರಿನ ಕನ್ಸೂಮರ್ ಕೋರ್ಟ್ ನಲ್ಲಿ ಕ್ಯಾಡ್ಬರಿ ಡೈರಿ ಮಿಲ್ಕ್ ಚಾಕಲೇಟ್ ಕಂಪನಿ ಮತ್ತು ಎಚ್ ಎಸ್ ಆರ್ ಲೇಔಟ್ ನಲ್ಲಿ ಇರುವ ಎಂಕೆ ರೇಟೇಲ್ ಸೂಪರ್ ಮಾರ್ಕೆಟ್ ವಿರುದ್ಧ ಕೇಸ್ ದಾಖಲಿಸಿದ್ದರು.
ಸದ್ಯ ಈ ಕೇಸ್ ನ್ನು ಕೈಗೆತ್ತಿಕೊಂಡ ಕನ್ಸ್ಯೂಮರ್ ಕೋರ್ಟ್ ವಿಚಾರಣೆ ನಡೆಸಿದೆ. ಆದರೆ ಈ ಕೇಸ್ ಕನ್ಸ್ಯೂಮರ್ ಪ್ರೊಟೆಕ್ಷನ್ ಆಕ್ಟ್ ಆಫ್ 1986 ಅಡಿಯಲ್ಲಿ ದಾಖಲಿಸಿದ ಕಾರಣ ಬರೀ ಐದು ಲಕ್ಷ ಗಳ ಪರಿಹಾರ ನೀಡಲು ಸಾಧ್ಯವಾಗುವುದು.
ಆದರೆ 2019ರಲ್ಲಿ ಈ ಕಾನೂನನ್ನು ಮರು ತಿದ್ದುಪಡಿ ಮಾಡಲಾಗಿತ್ತು ಆಗ 5ಲಕ್ಷ ಗಳಿಂದ ಒಂದು ಕೋಟಿಯವರೆಗೆ ಪರಿಹಾರ ನೀಡಬಹುದೆಂದು ಕಾನೂನು ತಿದ್ದುಪಡಿ ಆಗಿತ್ತು. ಆದರೆ ಮುಖೇಶ್ ಅವರು 2016ರಲ್ಲಿ ಕೇಸು ದಾಖಲಿಸಿದ ಕಾರಣ ಈ ಕೇಸ್ ನ್ನು ಬೆಂಗಳೂರು ಕನ್ಸ್ಯೂಮರ್ ಕೋರ್ಟ್ ನಿಂದ ಸ್ಟೇಟ್ ಕನ್ಸ್ಯೂಮರ್ ಕೋಟಿಗೆ ಈ ಪ್ರಕರಣದ ತೀರ್ಪು ನೀಡಲು ಕೊಡಲಾಗಿದೆ. ಸ್ಟೇಟ್ ಕನ್ಸ್ಯೂಮರ್ ಕೋರ್ಟ್ ನಲ್ಲಿ ಯಾವ ತೀರ್ಪು ಬರಬಹುದು ಎಂದು ಕಾದು ನೋಡಬೇಕು.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
26/05/2022 01:56 pm