ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಸ್ಮಯಾ ಆತ್ಮಹತ್ಯೆ ಕೇಸ್ : ಪತ್ನಿ ಆತ್ಮಹತ್ಯೆಗೆ ಪತಿ ಕಾರಣ, ತೀರ್ಪು ಕೊಟ್ಟ ಕೋರ್ಟ್

ಕೇರಳ: 2021 ರಲ್ಲಿ ವೈದ್ಯ ವಿದ್ಯಾರ್ಥಿನಿ ವಿಸ್ಮಯಾ ವಿ ನಾಯರ್ (22) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಕೊಲ್ಲಂ ಜಿಲ್ಲೆ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಆರೋಪಿ ಕಿರಣ್ ಕುಮಾರ್ ತಪ್ಪಿತಸ್ಥ ಎಂದು ತೀರ್ಪು ನೀಡಿದೆ. ವಿಸ್ಮಯಾ ವಿ ನಾಯರ್ ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿಯಾಗಿದ್ದರು. ಪತಿಯ ವರದಕ್ಷಿಣೆ ಕಿರುಕುಳ ತಾಳಲಾರದೆ ವಿಸ್ಮಯಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನ್ಯಾಯಾಲಯ ಹೇಳಿದೆ. ಆದರೆ ಶಿಕ್ಷೆಯ ಪ್ರಮಾಣವನ್ನು ಮಂಗಳವಾರಕ್ಕೆ ಕಾಯ್ದಿರಿಸಿದೆ.

ಅಪರಾಧಿ ಕಿರಣ್ ಕುಮಾರ್ ರಾಜ್ಯ ಮೋಟಾರು ವಾಹನ ಇಲಾಖೆಯಲ್ಲಿ ಹೆಚ್ಚುವರಿ ವಾಹನ ನಿರೀಕ್ಷಕನಾಗಿದ್ದನು. ಈತನ ಮೇಲೆ ವರದಕ್ಷಿಣೆ ಕಿರುಕುಳ ಆರೋಪ ಕೇಳಿ ಬರುತ್ತಿದ್ದಂತೆ ಸರಕಾರಿ ನೌಕರದಿಂದ ವಜಾ ಗೊಳಿಸಲಾಗಿತ್ತು.ಜೂನ್ 21, 2021 ರಂದು ಕೊಲ್ಲಂನಲ್ಲಿರುವ ಕುಮಾರ್ ಅವರ ಮನೆಯಲ್ಲಿ ವಿಸ್ಮಯಾ ನಿಗೂಢವಾಗಿ ಸಾವನ್ನಪ್ಪಿದ್ದರು. ವರದಕ್ಷಿಣೆ ಕಿರುಕುಳದಿಂದ ವಿಸ್ಮಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು 500 ಪುಟಗಳ ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ.

ವಿಸ್ಮಯಾ ಅವರ ತಂದೆ ತ್ರಿವಿಕ್ರಮನ್ ನಾಯರ್ ದಂಪತಿಗೆ ಉಡುಗೊರೆಯಾಗಿ ನೀಡಿದ 11 ಲಕ್ಷ ರೂಪಾಯಿ ವೆಚ್ಚದ ಹೊಸ ಕಾರಿನ ಬಗ್ಗೆ ಕುಮಾರ್ ಅತೃಪ್ತನಾಗಿದ್ದ. ತ್ರಿವಿಕ್ರಮನ್ ಅವರು ಕಾರು ಹೊರತುಪಡಿಸಿ 1.25 ಎಕರೆ ಜಮೀನು ಮತ್ತು 100 ಗ್ರಾಂ ಚಿನ್ನವನ್ನು ಕಿರಣ್ ಅವರಿಗೆ ಮದುವೆ ಸಮಯದಲ್ಲಿ ವರದಕ್ಷಿಣೆಯಾಗಿ ನೀಡಿದ್ದರು. ಇಷ್ಟು ನೀಡಿದರೂ ಕಿರಣ್ ತನ್ನ ಪತ್ನಿಗೆ ಕಿರುಕುಳ ನೀಡುತ್ತಿದ್ದನು.

Edited By : Nirmala Aralikatti
PublicNext

PublicNext

23/05/2022 10:19 pm

Cinque Terre

50.02 K

Cinque Terre

1