ಬಾಗಲಕೋಟೆ: ಪಿಎಸ್ ಐ ಅಕ್ರಮ ನೇಮಕಾತಿ ಡೀಲ್ ಗಾಳಿ ಈಗ ಬಾಗಲಕೋಟೆ ಜಿಲ್ಲೆಗೂ ತಲುಪಿದೆ. ಮತ್ತೊಬ್ಬ ಡೀಲ್ ಕುಳನನ್ನು ಸಿಐಡಿ ವಶಕ್ಕೆ ಪಡೆದಿದೆ.ಹೌದು ನವವಿವಾಹಿತನೊಬ್ಬ ಮದುವೆಯಾಗಿ ಮೊದಲ ರಾತ್ರಿಯ ಮೂಡ್ ನಲ್ಲಿದ್ದವ ಆದ್ರೆ ಮದುವೆ ನಡೆದ ಸ್ಥಳಕ್ಕೆ ಎಂಟ್ರಿ ಕೊಟ್ಟ ಸಿಐಡಿ ತಂಡ ನವವಿವಾಹಿತನನ್ನು ವಶಕ್ಕೆ ಪಡೆದಿರುವ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನಲ್ಲಿ ನಡೆದಿದೆ. ಶ್ರೀಕಾಂತ್ ಚೌರಿ ಬಂಧಿತ ನವವಿವಾಹಿತ.
ಹೌದು ಮೇ 14ರಂದು ಜಮಖಂಡಿ ನಗರದಲ್ಲಿ ಶ್ರೀಕಾಂತ್ನ ಮದುವೆ ಅದ್ದೂರಿಯಾಗಿ ನೆರವೇರಿತ್ತು. ಇದಾದ 5 ದಿನಕ್ಕೆ ಸಿಐಡಿ ಪೊಲೀಸರು ಈತನನ್ನು ವಶಕ್ಕೆ ಪಡೆದಿದ್ದಾರೆ.
ಧಾರವಾಡದಲ್ಲಿರುವ ಇನ್ಸ್ಪೈರ್ ಇಂಡಿಯಾ ಐಎಎಸ್ ಆ್ಯಂಡ್ ಕೆಎಎಸ್ ಕೋಚಿಂಗ್ ಸೆಂಟರ್ ನ ಮಾಜಿ ನಿರ್ದೇಶಕನಾಗಿದ್ದ ಶ್ರೀಕಾಂತ, ಪಿಎಸ್ ಐ ಅಭ್ಯರ್ಥಿಗಳಿಂದ ಲಕ್ಷ ಲಕ್ಷ ಹಣ ಪಡೆದು ಹುದ್ದೆ ಡೀಲ್ ಮಾಡಿಕೊಟ್ಟಿದ್ದಾನೆ ಎಂಬ ಶಂಕೆ ದಟ್ಟವಾಗಿದೆ. ರಬಕವಿಬನಹಟ್ಟಿ ತಾಲೂಕಿನ ಯರಗಟ್ಟಿಯ ಯಲ್ಲಮ್ಮ ದೇವಸ್ಥಾನದಲ್ಲಿ ಶ್ರೀಕಾಂತ ಮದುವೆ ನಡೆಯುತ್ತಿತ್ತು. ದೇವಸ್ಥಾನದಲ್ಲೇ ಆತನನ್ನು ವಶಕ್ಕೆ ಪಡೆದಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಸಿಐಡಿ ಅಧಿಕಾರಿಗಳು ಬೆಂಗಳೂರಿಗೆ ಕರೆದೊಯ್ದಿದ್ದಾರೆ.
PublicNext
18/05/2022 09:59 pm