ಬೆಂಗಳೂರು: 16ದಿನಗಳಿಂದ ತಪ್ಪಿಸಿಕೊಂಡಿದ್ದ ನಾಗೇಶನ ಮಾಹಿತಿ ಸಿಕ್ಕ ತಕ್ಷಣ ತಿರುವಣ್ಣಾಮಲೈ ಗೆ ಹೋಗಿದ್ದ ಕಾಮಕ್ಷಿಪಾಳ್ಯ ಎ ಎಸ್ ಐ ಶಿವಣ್ಣ ಹಾಗೂ ಪಿಸಿ ರವಿಕುಮಾರ್ ಇವ್ರು ನಾಗನ ಪಕ್ಕದಲ್ಲೇ ಧ್ಯಾನಕ್ಕೆ ಕುಳಿತಿದ್ರು.
ಮೊದಲು ಅವನ ಹೆಸ್ರು ಕೇಳಿದಾಗ ಬಾಯಿ ಬಿಡದ ನಾಗ ಪೊಲೀಸ್ರ ಸ್ಟೈಲ್ ನಲ್ಲಿ ಕೇಳ್ತಿದಂತೆ ನಾಗೇಶ ಅಂತ ಬಾಯಿ ಬಿಟ್ಟಿದ್ದ. ಕೈ ಮೇಲಿನ ಸುಟ್ಟಗಾಯ ನೋಡಿ ಪೊಲೀಸ್ರು ಕನ್ಫರ್ಮ್ ಮಾಡಿದ್ರು ಸ್ಥಳೀಯರು ಪೊಲೀಸ್ರನ್ನ ಪ್ರಶ್ನೆ ಮಾಡಿದ್ರು ಈ ವೇಳೆ ನಾಗನ ಇತಿಹಾಸವನ್ನ ಸ್ಥಳೀಯರಿಗೆ ತಿಳಿಸಿ ನಾಗನನ್ನ ಕರೆತಂದಿದ್ದಾರೆ.
PublicNext
14/05/2022 02:35 pm