ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

6 ಜನ ಹರ್ಷ ಹಂತಕರು ಅಂದರ್ : ಎಸ್ ಪಿ ಲಕ್ಷ್ಮೀ ಪ್ರಸಾದ್

ಶಿವಮೊಗ್ಗ: ಹಿಂದೂ ಯುವಕ ಹರ್ಷನ ಹತ್ಯೆ ಕೇಸ್ ಗೆ ಸಂಬಂಧಿಸಿದಂತೆ ಈಗಾಗಲೇ 6 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಶಿವಮೊಗ್ಗ ಎಸ್ ಪಿ ಲಕ್ಷ್ಮೀ ಪ್ರಸಾದ್ ಹೇಳಿದ್ದಾರೆ.

ಇನ್ನು ಬಂಧಿತ 6 ಜನ ಆರೋಪಿಗಳು ಶಿವಮೊಗ್ಗದವರೇ ಆಗಿದ್ದು, ಈವರೆಗೆ 13 ಎಫ್ ಐಆರ್ ಗಳು ದಾಖಲಾಗಿವೆ ಎಂದರು. ಹರ್ಷನ ಹತ್ಯೆಯ ಪ್ರಕರಣದ ಬಗ್ಗೆ ಇನ್ನೂ ತನಿಖೆ ಮುಂದುವರೆದಿದೆ. ಇನ್ನು ಹಲವರನ್ನು ಬಂಧಿಸಬಹುದು ಎಂದಿದ್ದಾರೆ.

A1,A2 ಆರೋಪಿಗಳನ್ನ ಶಿವಮೊಗ್ಗದಲ್ಲಿ ಬಂಧಿಸಲಾಗಿದೆ. A1, A3, A4, A5 ಆರೋಪಿಗಳು ಹರ್ಷನ ಮೇಲೆ ಹಲ್ಲೆ ನಡೆಸಿ ಕೊಂದಿದ್ದಾರೆ. A2, A6 ಹಂತಕರು ಸಹಕಾರ ನೀಡಿದ್ದಾರೆ. ಒಟ್ಟು 12 ಜನರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು ಇದರಲ್ಲಿ 6 ಜನರ ಪಾತ್ರ ಕಂಡು ಬಾರದ ಹಿನ್ನೆಲೆಯಲ್ಲಿ ಅವರನ್ನು ಬಿಟ್ಟು ಕಳಿಸಿದ್ದೇವೆ ಎಂದು ಮಾಧ್ಯಮ ಹೇಳಿಕೆ ನೀಡಿದ್ದಾರೆ.

A1 ಮೊಹಮ್ಮದ್ ಕಾಸಿಫ್​, A2 ಸೈಯದ್​ ನದೀಮ್​, A3 ಆಸಿಫ್​ ಉಲ್ಲಾ ಖಾನ್​, A4 ರಿಹಾನ್​ ಷರೀಫ್​,A5 ನಿಹಾನ್​, A6 ಅಬ್ದುಲ್​ ಅಫ್ನಾನ್​ ಬಂಧಿಸಲಾಗಿದೆ.

Edited By : Nirmala Aralikatti
PublicNext

PublicNext

22/02/2022 07:22 pm

Cinque Terre

137.44 K

Cinque Terre

40