ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಕಲಾಂಗ ಮಹಿಳೆ ಮೇಲೆ ಹಲ್ಲೆಗೈದ ಸಂಚಾರಿ ಎ‌ಎಸ್‌ಐ ಸಸ್ಪೆಂಡ್

ಬೆಂಗಳೂರು: ವಿಕಲಾಂಗ ಮಹಿಳೆ ಮೇಲೆ ಬೂಟುಗಾಲಿನಿಂದ ಒದ್ದು ಜಡೆ ಹಿಡಿದು ಎಳೆದಾಡಿ ಹಲ್ಲೆ ಮಾಡಿದ್ದ ಸಂಚಾರಿ ಎ‌ಎಸ್‌ಐ ನಾರಾಯಣ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಸಂಚಾರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಅವರು ಹಲ್ಲೆಗೈದ ನಾರಾಯಣ ಅವರನ್ನು ಅಮಾನತು ಮಾಡಿ ಆದೇಶ ನೀಡಿದ್ದಾರೆ.

ಟೋಯಿಂಗ್ ಮಾಡಿದರೆಂಬ ಕಾರಣಕ್ಕೆ ಎ‌ಎಸ್‌ಐ ನಾರಾಯಣ ಅವರ ಮೇಲೆ ವಿಕಲಾಂಗ ಮಹಿಳೆ ಮಂಜುಳಾ ಎಂಬಾಕೆ ಕಲ್ಲು ಎಸೆದಿದ್ದಳು. ಪರಿಣಾಮ ಎ‌ಎಸ್‌ಐ ನಾರಾಯಣ ಅವರ ಎಡಕಣ್ಣಿನ ಕೆಳಭಾಗದಲ್ಲಿ ಗಾಯವಾಗಿ ರಕ್ತ ಒಸರಿತ್ತು. ಇದರಿಂದ ಸಿಟ್ಟಿಗೆದ್ದ ನಾರಾಯಣ ಅವರು ಮಂಜುಳಾ ಮೇಲೆ ಹಲ್ಲೆ ಮಾಡಿ ಬೂಟುಗಾಲಿನಿಂದ ಹಲವು ಬಾರಿ ಒದ್ದಿದ್ದಾರೆ. ಹಾಗೂ ಜಡೆ ಹಿಡಿದು ಎಳೆದಾಡಿದ್ದರು. ಜನವರಿ 24ರಂದು ನಡೆದಿದ್ದ ಈ ಘಟನೆಯ ವಿಡಿಯೋ ಈಗ ವೈರಲ್ ಆಗಿದ್ದು ತಡವಾಗಿ ಬೆಳಕಿಗೆ ಬಂದಿದೆ.

Edited By : Nagaraj Tulugeri
PublicNext

PublicNext

30/01/2022 12:55 pm

Cinque Terre

105.19 K

Cinque Terre

21