ಮುಂಬೈ: 66 ವರ್ಷದ ಮಹಿಳೆಗೆ ಅವಹೇಳನಕಾರಿ ಪದಗಳನ್ನು ಬಳಸಿ ಮತ್ತು ತನ್ನ ಮಧ್ಯದ ಬೆರಳು ತೋರಿಸಿದ್ದ 31 ವರ್ಷದ ವ್ಯಕ್ತಿ ಆರು ತಿಂಗಳ ಕೈಲು ಶಿಕ್ಷೆಗೆ ಗುರಿಯಾಗಿದ್ದಾನೆ.
2018 ರಲ್ಲಿ ಮುಂಬೈನ ಪೆದ್ದಾರ್ ರಸ್ತೆಯಲ್ಲಿ 31 ವರ್ಷದ ವ್ಯಕ್ತಿಯು ಮಹಿಳೆಯ ಕಾರನ್ನು ಹಿಂದಿಕ್ಕಲು ಪ್ರಯತ್ನಿಸಿದ್ದ. ಈ ವೇಳೆ ಅವರಿಗೆ ಅವಹೇಳನಕಾರಿ ಪದಗಳನ್ನು ಬಳಸಿ ಬೈದು ಮತ್ತು ತನ್ನ ಮಧ್ಯದ ಬೆರಳು ತೋರಿಸಿದ್ದ. ಈ ಬಗ್ಗೆ ಮಹಿಳೆ ಕೋರ್ಟ್ ಮೆಟ್ಟಿಲೇರಿದ್ದರು. ಸಿಸಿಟಿವಿ ಕ್ಯಾಮೆರಾದ ಸಾಕ್ಷ್ಯಗಳಿಲ್ಲದೆ ಆರೋಪಗಳನ್ನು ಸಾಬೀತುಪಡಿಸಲು ಸಾಧ್ಯವಿಲ್ಲ ಎಂದು ವ್ಯಕ್ತಿ ಹೇಳಿಕೊಂಡಿದ್ದ. ಆದಾಗ್ಯೂ 66 ವರ್ಷದ ಮಹಿಳೆ ಅಸಭ್ಯ ಸನ್ನೆಗಳ ಬಗ್ಗೆ ಸುಳ್ಳು ಆರೋಪಗಳನ್ನು ಮಾಡುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
PublicNext
08/12/2021 04:30 pm