ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆಯಲ್ಲಿ ಲಾಕ್ ಅಪ್ ಡೆತ್...? ಎಸ್ಪಿ ಏನ್ ಹೇಳ್ತಾರೆ...?

ದಾವಣಗೆರೆ: ದಾವಣಗೆರೆಯಲ್ಲಿ ಮತ್ತೊಂದು ಲಾಕ್ ಅಪ್ ಡೆತ್ ಆಗಿದೆ ಎಂಬ ಆರೋಪ ಕೇಳಿ ಬಂದಿದೆ.

ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ವ್ಯಕ್ತಿ ಅನುಮಾನಾಸ್ಪದವಾಗಿ ಸಾವು ಕಂಡಿರುವ ಘಟನೆ ನಡೆದಿದೆ.

ದಾವಣಗೆರೆ ಸಿ ಇ ಎನ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ಸಂಬಂಧ ಚಿತ್ರದುರ್ಗ ಜಿಲ್ಲೆಯ ಭರಮಸಾಗರ ತಾಲ್ಲೂಕಿನ ಬಹೂದ್ದರಘಟ್ಟ ಗ್ರಾಮದ 35 ವರ್ಷದ ಕುಮಾರ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿತ್ತು‌. ಈ ಹಿನ್ನೆಲೆಯಲ್ಲಿ ಕುಮಾರ್ ನನ್ನು ಸಿಇಎನ್ ಪೊಲೀಸರು ವಶಕ್ಕೆ ಪಡೆದು ಕರೆ ತಂದಿದ್ದರು. ಈ ವೇಳೆ ಕುಮಾರ್ ಮೃತಪಟ್ಟಿದ್ದು, ಸಂಬಂಧಿಕರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಾವಣಗೆರೆ ಶವಗಾರದಲ್ಲಿ ಆರೋಪಿ ಕುಮಾರ್ ಮೃತದೇಹ ಇಡಲಾಗಿತ್ತು. ಈ ವೇಳೆ ಶವಾಗಾರದ ಬಳಿ ಆಗಮಿಸಿದ ಕುಟುಂಬಸ್ಥರ ಅಕ್ರಂದನ ಮುಗಿಲುಮುಟ್ಟಿತ್ತು.

ಪೊಲೀಸರ ಕಸ್ಟಡಿಯಲ್ಲಿ ಇದ್ದಾಗಲೇ ಕುಮಾರ್ ಸಾವನ್ನಪ್ಪಿದ್ದು, ಇದಕ್ಕೆ ಸಿಇಎನ್ ಪೊಲೀಸ್ ಇನ್ಸಪೆಕ್ಟರ್ ಅವರೇ ಕಾರಣ. ಪೊಲೀಸರು ಥಳಿಸಿರುವ ಕಾರಣ ಮೃತಪಟ್ಟಿದ್ದು, ಇನ್ ಸ್ಪೆಕ್ಟರ್ ಅವರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

ದಾವಣಗೆರೆ ಜಿಲ್ಲಾಸ್ಪತ್ರೆ ಆವರಣದಲ್ಲಿ ಡಿಎಸ್ ಎಸ್ ಸೇರಿದಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಎಸ್ಪಿ ಏನಂತಾರೆ...?

ಇನ್ನು ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಅವರು, ಕುಟುಂಬಸ್ಥರು ನೀಡುವ ದೂರು ದಾಖಲಿಸಿಕೊಳ್ಳುತ್ತೇವೆ. ಈ ಬಗ್ಗೆ ಎಫ್ ಐ ಆರ್ ಮಾಡಿ ಪ್ರಕರಣ ದಾಖಲಿಸಿ ಬಳಿಕ ತನಿಖೆ ನಡೆಸುತ್ತೇವೆ. ಆರೋಪಿ ಸಾವು ಪೊಲೀಸ್ ಕಸ್ಟಡಿಯಲ್ಲಿ ಯಾಕಾಯ್ತು. ಪೊಲೀಸರು ಇದಕ್ಕೆ ಕಾರಣನಾ ಇಲ್ಲವೋ ಎಂಬ ಬಗ್ಗೆ ಮಾಹಿತಿ ಇಲ್ಲ. ಕುಮಾರ್ ಇಲ್ಲವೇ ಬೇರೆ ಕಾರಣದಿಂದ ಮೃತಪಟ್ಟಿರಬಹುದೋ ಎಂಬ ಬಗ್ಗೆಯೂ ಮಾಹಿತಿ ಪಡೆಯಲಾಗುವುದು. ಅಗತ್ಯಬಿದ್ದರೆ ಸಿಐಡಿಗೆ ಈ ಪ್ರಕರಣ ಒಪ್ಪಿಸಲು ಏನೇನೆಲ್ಲಾ ಕ್ರಮ ತೆಗೆದುಕೊಳ್ಳಬೇಕೋ ಅದನ್ನು ಮಾಡುತ್ತೇವೆ ಎಂದು ಹೇಳಿದ್ದಾರೆ.

Edited By : Nagesh Gaonkar
PublicNext

PublicNext

05/12/2021 05:17 pm

Cinque Terre

51.59 K

Cinque Terre

0