ಕೋಹಿಮಾ: ದಂಗೆಕೋರರ ವಿರುದ್ಧದ ಕಾರ್ಯಾಚರಣೆ ವೇಳೆ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 13 ಮಂದಿ ಮೃತಪಟ್ಟ ಘಟನೆ ನಾಗಾಲ್ಯಾಂಡ್‌ನ ಮೋನ್ ಜಿಲ್ಲೆಯ ಆಟಿಂಗ್‌ನ ಶನಿವಾರ ರಾತ್ರಿ ನಡೆದಿದೆ.
ಭದ್ರತಾ ಪಡೆಗಳು ಎನ್‌ಎಸ್‌ಸಿಎನ್ ಉಗ್ರರು ಎಂದು ತಪ್ಪಾಗಿ ಭಾವಿಸಿ ಗುಂಡಿನ ದಾಳಿ ನಡೆಸಿದ್ದರಿಂದ ಈ ಅನಾಹುತ ಸಂಭವಿಸಿದೆ ಎಂದು ವರದಿಯಾಗಿದೆ. ಹತ್ಯೆಯಾದವರೆಲ್ಲ ಕೊನ್ಯಾಕ್ ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಸಂತ್ರಸ್ತರು ನಿನ್ನೆ ಸಂಜೆ ಕೆಲಸ ಮುಗಿಸಿಕೊಂಡು ವಾಹನದಲ್ಲಿ ಮನೆಗೆ ಹೋಗುತ್ತಿದ್ದರು. ಮೃತರೆಲ್ಲರೂ ಕಲ್ಲಿದ್ದಲು ಗಣಿಯಲ್ಲಿ ದಿನಗೂಲಿ ಕೆಲಸ ಮಾಡ್ತಿದ್ದರು ಎನ್ನಲಾಗಿದೆ.
ದಾಳಿಯಿಂದ ಆಕ್ರೋಶಗೊಂಡ ಅಲ್ಲಿನ ಸ್ಥಳೀಯರು ಭದ್ರತಾ ಸಿಬ್ಬಂದಿ ವಾಹನದ ಮೇಲೆ ಬೆಂಕಿಯಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ನಾಗಲ್ಯಾಂಡ್ ಸಿಎಂ ಘಟನೆಯನ್ನ ತನಿಖೆಗೆ ಆದೇಶಿಸಿದ್ದಾರೆ. ಕೇಂದ್ರ ಸಚಿವ ಅಮಿತ್ ಶಾ ಘಟನೆಯನ್ನ ಖಂಡಿಸಿದ್ದಾರೆ.
PublicNext
05/12/2021 11:24 am