ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಎಸಿಬಿ ದಾಳಿ ಹಿಂದೆ ಷಡ್ಯಂತ್ರ; ಮಾಯಣ್ಣ

ಬೆಂಗಳೂರು: ಮೂರು ವರ್ಷ ಗಳಿಂದಲೂ ನನ್ನ ವಿರುದ್ಧ ಪಿತೂರಿ ನಡೆಯುತ್ತಲೇ ಇತ್ತು. ರೇಡ್ ಮಾಡಿಸ್ತೀನಿ ಅಂತಾ ವಾಟ್ಸ್ ಆ್ಯಪ್ ಮೆಸೇಜ್ ಕೂಡ ಬರ್ತಾಯಿತ್ತು. ಈ ಬಗ್ಗೆ ಸಾಕಷ್ಟು ಸಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾಗಿ ಮಾಯಣ್ಣ ತಿಳಿಸಿದ್ದಾರೆ.

ಬೆಂಗಳೂರಿ‌ನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಮಾಯಣ್ಣ, ಬಿಬಿಎಂಪಿಯಲ್ಲಿರುವ ಹಾಗೂ ಹೊರಗಿನ ಪಟಾಲಂನಿಂದ ಈ ಕೆಲಸ ಆಗಿದೆ.

"ನನ್ನದು ಪಿತ್ರಾರ್ಜಿತ ಆಸ್ತಿ. ತಾಯಿ ಮಾಡಿಟ್ಟ ಮನೆ, 53 ಸಾವಿರ ನಗದು, 500 ಗ್ರಾಂ ಚಿನ್ನ ಸಿಕ್ಕಿದೆ.

25 ಪ್ರಶ್ನೆಗಳ‌ನ್ನು ಕೇಳಿರುವ ಎಸಿಬಿ ಅಧಿಕಾರಿಗಳಿಗೆ ಸಮರ್ಪಕ ಉತ್ತರ ನೀಡುವೆ" ಎಂದರು.

ಎಸಿಬಿ ದಾಳಿಯಿಂದ ನನ್ನ ಆಸ್ತಿ ಕಾನೂನುಬದ್ದವಾಗಿ ಆಡಿಟ್ ಆಗಿದೆ. ಈ ಸಂಚಿನ ಹಿಂದೆ ಬಿಬಿಎಂಪಿ ನೌಕರನೊಬ್ಬ ಇದ್ದಾನೆ ಎಂದು ಗಂಭೀರ ಆಪಾದನೆ ಮಾಯಣ್ಣ ಮಾಡಿದರು.

ಬಿಬಿಎಂಪಿ ಎಫ್ ಡಿಸಿ ನೌಕರ ನಾಗಿರುವ ಮಾಯಣ್ಣ ಮನೆ ಮೇಲೆ ನಿನ್ನೆ ಎಸಿಬಿ ದಾಳಿ ನಡೆದಿತ್ತು.

Edited By : Manjunath H D
PublicNext

PublicNext

25/11/2021 02:59 pm

Cinque Terre

67.05 K

Cinque Terre

3