ಗದಗ : ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳು ಬೇಧಿಸುವಲ್ಲಿ ಗದಗ ಪೊಲೀಸರು ಯಶಸ್ವಿಯಾಗಿದ್ದಾರೆ. ಗದಗ ಜಿಲ್ಲೆಯಲ್ಲಿ ಒಟ್ಟು 74 ಪ್ರಕರಣ ಬೇಧಿಸಿ, 80 ಜನರನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ. ಇನ್ನು ಕಳ್ಳತನವಾಗಿದ್ದ ಸ್ವತ್ತು, ಮಾಲಿಕರಿಗೆ ಹಿಂದುರಿಗಿಸಲಾಗಿದೆ ಎಂದು ಗದಗ ಎಸ್ಪಿ ಶಿವಪ್ರಕಾಶ್ ದೇವರಾಜ್ ಹೇಳಿಕೆ ನೀಡಿದ್ರು. ಗದಗ ನಗರದ ಪೊಲೀಸ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ವರ್ಷದಲ್ಲಿ ದಾಖಲಾಗಿದ್ದ ಪ್ರಕರಣಗಳಿವು.
ಇನ್ನು ಪೊಲೀಸರ ಬಗ್ಗೆ ಸಾರ್ವಜನಿಕರಲ್ಲಿ ಭರವಸೆ ಹೆಚ್ಚಿಸಲು ಪ್ರಾಪರ್ಟಿ ಪರೇಡ್ ಅಯೋಜನೆ ಮಾಡಲಾಗುತ್ತೆ. ಜೊತೆಗೆ ಹಿಂದಿನ ಎಸ್ಪಿ ಯತೀಶ್ ಎನ್ ಅವರ ಮಾರ್ಗದರ್ಶನದಲ್ಲಿ ಪ್ರಕರಣ ಬೇಧಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ನೂತನ ಎಸ್ಪಿ ಶಿವಪ್ರಕಾಶ್ ಅಭಿನಂದಿಸಿದ್ರು. ಇದೇ ವೇಳೆ ಕಳ್ಳತನವಾಗಿದ್ದ ವಸ್ತುಗಳನ್ನ ಆಯಾ ಮಾಲಿಕರು ಎಸ್ಪಿಯವರಿಂದ ಹಿಂತೆಗೆದುಕೊಂಡರು.
PublicNext
02/11/2021 03:45 pm