ನವದೆಹಲಿ : 'ಸುಪ್ರೀಂಕೋರ್ಟ್ ನ ಹೊರಗೆ ಒಬ್ಬ ಮಹಿಳೆ ಹಾಗೂ ಒಬ್ಬ ಪುರುಷ ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಸಿದ ಘಟನೆ ಸೋಮವಾರ ನಡೆದಿದೆ. ಮೈಮೇಲೆ ಸೀಮೆ ಎಣ್ಣೆ ಸುರಿದು, ಬೆಂಕಿ ಹಚ್ಚಿಕೊಂಡಿದ್ದಾರೆ. ಇದನ್ನು ಗಮನಿಸಿದ ನ್ಯಾಯಾಲಯದ ಪೊಲೀಸ್ ಪಡೆ ಕೂಡಲೇ ಅವರಿಬ್ಬರ ಅಂಟಿದ ಬೆಂಕಿ ನಂದಿಸಿದೆ. ರಾಮ್ ಮನೋಹರ್ ಲೊಹಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತು' ಎಂದು ನವದೆಹಲಿಯ ಪೊಲೀಸ್ ಉಪ ಆಯುಕ್ತ ದೀಪಕ್ ಯಾದವ್ ಅವರು ಮಾಹಿತಿ ನೀಡಿದ್ದಾರೆ.
'ಈ ಕೃತ್ಯದ ಹಿಂದಿನ ಕಾರಣವೇನೆಂಬುದು ತಿಳಿದಿಲ್ಲ. ಈ ಬಗ್ಗೆ ತನಿಖೆ ಆರಂಭಿಸಲಾಗಿದೆ. ಹೆಚ್ಚಿನ ಮಾಹಿತಿ ಲಭ್ಯವಿಲ್ಲ' ಎಂದು ಅವರು ತಿಳಿಸಿದರು.
PublicNext
16/08/2021 07:57 pm