ಬೆಂಗಳೂರು: ಸೇಫ್ ಸಿಟಿ ಪ್ರಾಜೆಕ್ಟ್ ಟೆಂಡರ್‌ನಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ವಿಚಾರವಾಗಿ ಗೃಹ ಇಲಾಖೆ ಕಾರ್ಯದರ್ಶಿ ಡಿ. ರೂಪಾ ಹಾಗೂ ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಕಮಿಷನರ್ (ಆಡಳಿತ) ಹೇಮಂತ್ ನಿಂಬಾಳ್ಕರ್ ನಡುವಿನ ಜಟಾಪಟಿ ಮುಂದುವರಿದಿದೆ.
ಐಪಿಎಸ್ ಅಧಿಕಾರಿ ಡಿ.ರೂಪಾ ಮಾಡಿರುವ ಆರೋಪಗಳ ಬಗ್ಗೆ ಮಾಧ್ಯಮಗೋಷ್ಟಿಯಲ್ಲಿ ಹೇಮಂತ್ ನಿಂಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ನಿರ್ಭಯಾ ಹೆಸರಿನ ಸೇಫ್ ಸಿಟಿ ಪ್ರಾಜೆಕ್ಟ್ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಊಹೆಗಳು ಹರಿದಾಡುತ್ತಿವೆ. ಟೆಂಡರ್ ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಈ ಆರೋಪ ನಿರಾಧಾರ ಎಂದು ಹೇಮಂತ್ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಡಿ. ರೂಪಾ ಆರೋಪಕ್ಕೆ ಕೆಲವೊಂದು ಸ್ಪಷ್ಟನೆ ನೀಡಿದ ಅವರು, ಭಾರತ್ ಎಲೆಕ್ಟ್ರಾನಿಕ್ಸ್ ಲಿ. ಕಾಲ್ ಒನ್ ನಲ್ಲಿ ಟೆಂಡರ್ ಕರೆಯಲಿಲ್ಲ. ಮೂರು ಕಂಪೆನಿಗಳು ಪರಿಶೀಲನೆಗೆ ಮುನ್ನವೇ ತಿರಸ್ಕೃತ ಆದವು, ಕಾಲ್ 2 ನಲ್ಲಿ ಮೂರು ಕಂಪೆನಿಗಳನ್ನು ಕ್ವಾಲಿಫೈ ಮಾಡಲಾಗಿದೆ. 20 ಜೂನ್ 2020 ರಲ್ಲಿ ಈ ಪ್ರಕ್ರಿಯೆ ನಡೆದಿದೆ ಎಂದು ತಿಳಿಸಿದರು. ಕರ್ನಾಟಕ ಸರ್ಕಾರದ ಆದೇಶದ ಪ್ರಕಾರ ಚೈನಾ ಉಪಕರಣವನ್ನು ಟೆಂಡರ್ ಪ್ರಕ್ರಿಯೆಯಲ್ಲಿ ತೆಗೆದುಕೊಳ್ಳಬಾರದು. ಚಾಲ್ತಿಯಲ್ಲಿರುವ ಕಂಪನಿಗೆ ಇದು ಅನ್ವಯ ಆಗುತ್ತದೆ ಎಂದು ಆದೇಶ ಇತ್ತು. ಈ ನಿಟ್ಟಿನಲ್ಲಿ ಟೆಂಡರ್ ಕಾಲ್ 2 ರದ್ದುಗೊಳಿಸಲಾಗಿದೆ ಹೊರತು ಬೇರೆ ಉದ್ದೇಶ ಇಲ್ಲ. ಆದರೆ ಮೊದಲ ಗುತ್ತಿಗೆ ರದ್ದು ಮಾಡಿದ್ದು ಏಕೆ ಹಾಗೂ ಇದರಲ್ಲಿ ಅವ್ಯವಹಾರ ನಡೆಯುವ ಸಾಧ್ಯತೆ ಇದೆ ಎಂಬ ಆರೋಪವನ್ನು ಹೇಮಂತ್ ನಿಂಬಾಳ್ಕರ್ ಅಲ್ಲಗೆಳೆದಿದ್ದಾರೆ.
PublicNext
27/12/2020 09:10 pm