ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾಕ್‌ನಲ್ಲಿ ಹಿಂದೂ ವ್ಯಕ್ತಿಯ ಗುಂಪು ಹತ್ಯೆಗೆ ಯತ್ನ; ಎದೆ ಜಲ್ಲೆನಿಸುವ ವಿಡಿಯೋ ವೈರಲ್

ಇಸ್ಲಾಮಾಬಾದ್: ಮೂಲಭೂತವಾದಿಗಳು, ಜಿಹಾದಿಗಳ ದೇಶವಾದ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಿಗೆ ಬದುಕುವುದು ಕಷ್ಟವಾಗಿದೆ. ಪಾಕಿಸ್ತಾನದ ವಿವಿಧ ಭಾಗಗಳಲ್ಲಿ ಧರ್ಮನಿಂದೆಯ ಆರೋಪದ ಮೇಲೆ ಜನರನ್ನು ಕೊಲ್ಲಲಾಗುತ್ತಿದೆ.

ಹೌದು..ಪಾಕಿಸ್ತಾನಿ ಮಾಧ್ಯಮಗಳ ಪ್ರಕಾರ, ಪಾಕಿಸ್ತಾನದಲ್ಲಿ ಹಿಂದೂ ಕಾರ್ಯಕರ್ತನೊಬ್ಬನನ್ನು ಖುರಾನ್‌ಗೆ ಅಗೌರವ ತೋರಿದ್ದಾನೆಂಬ ಆರೋಪದ ಮೇಲೆ ಗುಂಪು ಹತ್ಯೆಗಾಗಿ ಪ್ರಯತ್ನಿಸಲಾಗಿದೆ. ಅಲ್ಲದೇ ಅವನನ್ನು ಸೆರೆಹಿಡಿಯಲು ಮತ್ತು ಕೊಲ್ಲಲು ನೂರಾರು ಜನರು ಆತನ ಮನೆಯ ಮುಂದೆ ಜಮಾಯಿಸಿರುವ ಭಯಾನಕ ವಿಡಿಯೋ ವೈರಲ್ ಆಗಿದೆ. ಜೊತೆಗೆ ಆ ವ್ಯಕ್ತಿಯನ್ನು ಹಿಡಿಯಲು ಆತನ ಅಪಾರ್ಟ್‌ಮೆಂಟ್‌ ಮೇಲೆ ಹತ್ತಿರುವುದು ವಿಡಿಯೋದಲ್ಲಿ ಕಾಣಬಹುದು.

ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ವಿವಾದದ ನಂತರ ಪಾಕಿಸ್ತಾನದ ಹೈದರಾಬಾದ್‌ನಲ್ಲಿರುವ ಹಿಂದೂ ಅಲ್ಪಸಂಖ್ಯಾತ ಸಮುದಾಯದ ಕಾರ್ಯಕರ್ತನ ವಿರುದ್ಧ ಖುರಾನ್‌ಗೆ ಅವಮಾನ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದಾರೆ. ವರದಿಯ ಪ್ರಕಾರ, ಖುರಾನ್‌ಗೆ ಅವಮಾನ ಮಾಡಿದ್ದಾನೆಂದು ಹೇಳುವ ವ್ಯಕ್ತಿಯ ಹೆಸರು ಅಶೋಕ್ ಕುಮಾರ್.

ಅಶೋಕ್ ಕುಮಾರ್ ಅವರನ್ನು ಹಿಡಿದು ಕೊಲ್ಲಲು ನೂರಾರು ಜನರು ಅವರ ಮನೆಯ ಕೆಳಗೆ ಜಮಾಯಿಸಿರುವ ವಿಡಿಯೋ ವೈರಲ್ ಆಗಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಗುಂಪನ್ನು ಚದುರಿಸುವ ಮೂಲಕ ಅಶೋಕ್‌ಕುಮಾರ್‌ನ ಪ್ರಾಣ ಉಳಿಸಿದ್ದಾರೆ ಎನ್ನಲಾಗಿದೆ.

Edited By : Abhishek Kamoji
PublicNext

PublicNext

22/08/2022 02:41 pm

Cinque Terre

70.25 K

Cinque Terre

5