ಮುಂಬೈ: ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು ಎಂಬ ಹಾಡು ನೀವು ಕೇಳಿರ್ತೀರಿ. ಆದ್ರೆ ಆ ಹಾಡು ಇಲ್ಲಿ ನಿಜರೂಪದಲ್ಲಿ ನಡೆದೇ ಬಿಟ್ಟಿದೆ.
ಅಂದ್ ಹಾಗೆ ಈಕೆ ಹೆಸರು ಅರ್ಚಿತಾ. ಕಂಠಪೂರ್ತಿ ಮದ್ಯ ಕುಡಿದು ಕಾರ್ ಚಲಾಯಿಸಿಕೊಂಡು ಬಂದ ಈಕೆ ಹಲವು ವಾಹನಗಳಿಗೆ ಗುದ್ದಿದ್ದಾಳೆ. ನಂತರ ಸಾರ್ವಜನಿಕರೇ ಈಕೆಯ ವಾಹನವನ್ನು ತಡೆದು ಪ್ರಶ್ನೆ ಮಾಡಿದ್ದಾರೆ. ಅಷ್ಟರಲ್ಲಿ ಅಲ್ಲಿ ಬಂದ ಪೊಲೀಸ್ ಅಧಿಕಾರಿಯೊಬ್ಬರ ಕಾಲರ್ ಹಿಡಿದು ಧಮ್ಕಿ ಹಾಕಿದ ಅರ್ಚಿತಾ ಅವರನ್ನು ಒದೆಯಲು ಯತ್ನಿಸಿದ್ದಾಳೆ. ನಂತರ ರಸ್ತೆಯಲ್ಲೇ ಬಿದ್ದು ಉರುಳಾಡಿ ಹುಚ್ಚಾಟ ತೋರಿದ್ದಾಳೆ. ಸದ್ಯ ಈ ಎಲ್ಲ ವಿಡಿಯೋಗಳು ವೈರಲ್ ಆಗಿದ್ದು ಪೊಲೀಸರು ನಶೆ ರಾಣಿ ಅರ್ಚಿತಾಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
PublicNext
20/06/2022 04:47 pm