ಕೋಲಾರ: ಗಣೇಶೋತ್ಸವದ ಪ್ರಯುಕ್ತ ಸುಮಾರು 9 ಕಡೆಗಳಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳನ್ನು ದುಷ್ಕರ್ಮಿಗಳು ವಿರೂಪಗೊಳಿಸಿದ ಘಟನೆ ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ನಡೆದಿದೆ.
ತಡರಾತ್ರಿ ನಗರದ ಕುಂಬಾರಪೇಟೆ, ಬಾಬುರಾವ್ ಬೀದಿ, ಕುಪ್ಪಶೆಟ್ಟಿ ಬಾವಿ ಬೀದಿ, ಶ್ರೀಧರ್ಮರಾಯಸ್ವಾಮಿ ದೇವಸ್ಥಾನದ ಬಳಿ, ಸಿಪಿ ರಸ್ತೆ ಹಾಗೂ ಕೆ.ಎಂ.ಅರ್. ಸ್ಟೋರ್ಸ್ ಬಳಿ ನಡೆದಿದ್ದು ಗಣೇಶ ಮೂರ್ತಿಗಳನ್ನು ವಿರೂಪಗೊಳಿಸಲಾಗಿದೆ.
ಕುಡಿದ ಮತ್ತಿನಲ್ಲಿ ಐವರು ಯುವಕರಿಂದ ಈ ಘಟನೆ ನಡೆದಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯಗಳು ಸೆರೆಯಾಗಿದೆ. ಆರೋಪಿಗಳಾದ ಮಲ್ಲೇಶ್, ಕಾಂತರಾಜು, ಗಿರೀಶ್, ಪುನೀತ್, ಚಂದು ಎಂಬವವರರನ್ನು ಪೊಲೀಸರು ಬಂಧಿಸಿ ಎಫ್‌ಐಆರ್ ದಾಖಲು ಮಾಡಿದ್ದಾರೆ.
ವರದಿ : ರವಿ ಕುಮಾರ್.
PublicNext
04/09/2022 05:01 pm