ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಇಸ್ಲಾಮ್ ಉಳಿವಿಗಾಗಿ ಭಾರತದ ಮೇಲೆ ದಾಳಿ ಮಾಡಿ': ಮುಸ್ಲಿಮರನ್ನು ಪ್ರಚೋದಿಸಿದ ಐಸಿಸ್

ನವದೆಹಲಿ: ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ ಭಾರತದ ವಿರುದ್ಧ ಬಹಿರಂಗವಾಗಿ ಮುಸ್ಲಿಂರನ್ನ ಎತ್ತಿ ಕಟ್ಟುವ ಕೆಲಸ ಮಾಡಿದೆ. “ಭಾರತದಲ್ಲಿ ಇಸ್ಲಾಂ ಧರ್ಮವನ್ನು ರಕ್ಷಿಸಲು ಎಲ್ಲಾ ಮುಸ್ಲಿಮರು ಒಗ್ಗೂಡಿ ಭಾರತದ ಮೇಲೆ ದಾಳಿ ನಡೆಸುವಂತೆ ಐಎಸ್ ಪ್ರಚೋದಿಸಿದೆ.

ಮುಂದುವರೆದು ಈ ಮನವಿಯ ಉದ್ದೇಶ ಹೇಳಿದ ಐಎಸ್, ಭಾರತ ಸರ್ಕಾರ ನಿರಂತರವಾಗಿ ಇಸ್ಲಾಂ ಧರ್ಮವನ್ನ ಗುರಿಯಾಗಿಸುತ್ತಿದೆ ಎಂದಿದೆ.

ಇನ್ನು ಈ ಎಲ್ಲಾ ವಿಷಯಗಳನ್ನ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ (ಐಎಸ್) ವಕ್ತಾರ ಅಬು ಉಮರ್-ಉಲ್-ಮುಜಾಹಿರ್ ಹೇಳಿದ್ದು, ಭಾರತದಲ್ಲಿ ಭಯೋತ್ಪಾದಕ ದಾಳಿ ನಡೆಸುವಂತೆ ಮುಸ್ಲಿಮರಿಗೆ ಬಹಿರಂಗವಾಗಿ ಮನವಿ ಮಾಡಿದ್ದಾನೆ. ಭಾರತದ ವಿರುದ್ಧ ಜಂಟಿ ದಾಳಿ ನಡೆಸಬೇಕು ಎಂದಿದ್ದಾನೆ. ಅದ್ರಂತೆ, ಐಎಸ್ ವಕ್ತಾರ ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಮುಸ್ಲಿಮರಿಗೆ ಒಗ್ಗೂಡುವಂತೆ ಪ್ರಚೋದಿಸಿದ್ದಾರೆ. ಭಾರತದ ಮೇಲೆ ದಾಳಿ ಮಾಡಲು ಒಗ್ಗೂಡಿ “ಭಾರತದ ವಿರುದ್ಧ ಜಂಟಿ ದಾಳಿ ನಡೆಸಬೇಕು. ಭಾರತದಲ್ಲಿ ಇಸ್ಲಾಂ ಧರ್ಮವನ್ನು ರಕ್ಷಿಸುವುದು ಇಸ್ಲಾಮಿಕ್ ಸ್ಟೇಟ್‌ನ ಉದ್ದೇಶವಾಗಿದೆ. ಏಕೆಂದರೆ ಅಲ್ಲಿ ಇಸ್ಲಾಂ ನಿರಂತರವಾಗಿ ಸರ್ಕಾರದ ಕೆಂಗಣ್ಣಿಗೆ ಗುರಿಯಾಗುತ್ತಲೇ ಇದೆ” ಎಂದಿದೆ.

Edited By : Nagaraj Tulugeri
PublicNext

PublicNext

15/09/2022 09:40 pm

Cinque Terre

70.57 K

Cinque Terre

89