ನವದೆಹಲಿ: "ನಾನು ಅವರ ಕೈಗೆ ಸಿಕ್ಕಾಗ ಬಟ್ಟೆಯಿಂದ ಮುಖ ಮುಚ್ಚಿ, ಕೈ ಕಟ್ಟಿ ಹಾಕಿ ದಟ್ಟ ಕಾಡಿನಲ್ಲಿ ಕರೆದೊಯ್ದರು. ಅಲ್ಲಿ ನನಗೆ ಕರೆಂಟ್ ಶಾಕ್ ಕೊಟ್ಟು ಚಿತ್ರಹಿಂಸೆ ನೀಡಿದ್ದಾರೆ."
ಹೀಗಂತ ಚೀನಾ ಸೈನ್ಯದ ಕೈಗೆ ಸಿಲುಕಿ ಬಿಡುಗಡೆ ಹೊಂದಿ ವಾಪಸ್ ಬಂದಿರುವ 17 ವರ್ಷದ ಬಾಲಕ ಮಿರಾಮ್ ಟಾರೋರ್ ಹೇಳಿದ್ದಾನೆ. ಖಾಸಗೀ ವಾಹಿನಿಗೆ ಸಂದರ್ಶನ ನೀಡಿರುವ ಮಿರಾಮ್ ತನ್ನನ್ನು ಚೀನಾ ಸೈನಿಕರು ವಶಕ್ಕೆ ಪಡೆದಾಗಿನ ಅನುಭವಗಳನ್ನು ಹೇಳಿಕೊಂಡಿದ್ದಾನೆ. ಅರುಣಾಚಲ್ ಪ್ರದೇಶದ ಅಪ್ಪರ್ ಸಿಯಾಂಗ್ ಮೂಲದ ಈತ ಜನವರಿ 18ರಂದು ಚೀನಾ ಗಡಿ ಪ್ರದೇಶದಲ್ಲಿ ನಾಪತ್ತೆಯಾಗಿದ್ದ. ಆ ವೇಳೆ ಆತ ತನ್ನ ಸ್ನೇಹಿತರನ್ನು ಭೇಟಿಯಾಗಲು ತೆರಳಿದ್ದ ಎನ್ನಲಾಗಿದೆ.
ನನ್ನನ್ನು ವಶಕ್ಕೆ ಪಡೆದಾಗ ಅವರು ಭಾರತೀಯ ಸೈನಿಕರೋ, ಚೀನಾ ಸೈನಿಕರೋ ಎಂಬುದು ನನಗೆ ತಿಳಿಯಲಿಲ್ಲ. ಸೀದಾ ನನ್ನನ್ನು ದಟ್ಟ ಕಾಡಿನಲ್ಲಿ ಕರೆದೊಯ್ದು ಕರೆಂಟ್ ಶಾಕ್ ಕೊಟ್ಟರು. ಬಳಿಕ ಯಾವುದೇ ಹಿಂಸೆ ನೀಡಿಲ್ಲ. ಅವರು ಊಟ ಮತ್ತು ನೀರು ಕೊಟ್ಟಿದ್ದಾರೆ ಎಂದು ಮಿರಾಮ್ ತಿಳಿಸಿದ್ದಾನೆ.
PublicNext
02/02/2022 10:53 pm