ಬೆಂಗಳೂರು : ಅನ್ಯ ರಾಜ್ಯದ ವಿದ್ಯಾರ್ಥಿನಿಯೋರ್ವಳ ಮೇಲೆ ನಡೆದ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಈ ವೇಳೆ ಮರಣೋತ್ತರ ಪರೀಕ್ಷೆಯ 10 ಸಾವಿರ ರೂ. ವೆಚ್ಚವನ್ನು ವೈಯಕ್ತಿಕವಾಗಿ ಪಿಎಸ್ ಐ ವಾಸೀಂವುಲ್ಲಾ ಭರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಈ ಮೂಲಕ ಬ್ಯಾಡರಹಳ್ಳಿ ಠಾಣಾ ಪಿಎಸ್ ಐ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ವೆಚ್ಚ ಮಾತ್ರ ಭರಿಸದ ಪಿ ಎಸ್ ಐ ಮೃತ ಯುವತಿಯ ಶವವನ್ನು ಅಸ್ಸಾಂಗೆ ತಲುಪಿಸಲು ನೆರವಾಗಿದ್ದಾರೆ.
ಡಿ.17ರಂದು ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.
ಕಾಲೇಜು ವಿದ್ಯಾರ್ಥಿನಿ ರೇಪ್ ಆ್ಯಂಡ್ ಮರ್ಡರ್ ಕೇಸ್ ಗೆ ಟ್ವಿಸ್ಟ್ ಸಿಕ್ಕಿದ್ದು, ನಾನು ರೇಪ್ ಮಾಡಿಲ್ಲ ಒಪ್ಪಿತ ಲೈಂಗಿಕ ಕ್ರಿಯೆಯಾಗಿತ್ತು.
ಅಲ್ಲದೆ ನಾನು ಕೊಲೆ ಮಾಡಿಲ್ಲ ರಕ್ತಸ್ರಾವವಾಗಿ ಅವಳೇ ಪ್ರಜ್ಞೆ ತಪ್ಪಿದಳು ಎಂದು ಆರೋಪಿ ತಿಳಿಸಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಪೊಲೀಸರು ಆರೋಪಿ ರೆಹಮಾನ್ ನನ್ನು ವಿಚಾರಣೆ ನಡೆಸಿದ್ದಾರೆ.
ಮೃತ ಯುವತಿಯ ಮರಣೋತ್ತರ ಪರೀಕ್ಷಾ ವರದಿಗೆ ಕಾಯುತ್ತಿದ್ದಾರೆ. ಯುವತಿ ಈಶಾನ್ಯ ರಾಜ್ಯದಿಂದ ವಿದ್ಯಾಭ್ಯಾಸ ಮಾಡಲು ಬೆಂಗಳೂರು ನಗರಕ್ಕೆ ಬಂದಿದ್ದಳು.
ವಿದ್ಯಾಭ್ಯಾಸಕ್ಕೆ ಬಂದ ಯುವತಿಯನ್ನು ರೇಪ್ ಆ್ಯಂಡ್ ಮರ್ಡರ್ ಮಾಡಿದ ಘಟನೆ ನಡೆದಿತ್ತು.
PublicNext
18/12/2020 09:51 pm