ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಬರಗೂರು ವಿರುದ್ಧ ಬೆಂಕಿಯುಗುಳಿದ ಸಚಿವ ಬಿ.ಸಿ. ನಾಗೇಶ್...!

ದಾವಣಗೆರೆ: ಜೆ ಎನ್ ಯು ಹಾಗೂ ಸಾಹಿತಿ ಬರಗೂರು ರಾಮಚಂದ್ರಪ್ಪ ನೇತೃತ್ವದ ತಂಡ ಭಾರತವನ್ನು ತುಕ್ಡಾ ತುಕ್ಡಾ ಮಾಡುವ ಗ್ಯಾಂಗ್. ಇದರಲ್ಲಿ ವಿಫಲರಾಗುವುದು ಖಚಿತ. ಕರ್ನಾಟಕ ಪಠ್ಯಪುಸ್ತಕಕ್ಕೆ ಸಂಬಂಧಿಸಿದಂತೆ ಜೆ ಎನ್ ಯು ಪ್ರೊಫೆಸರ್ ಯಾಕೆ ಪತ್ರ ಬರೆಯಬೇಕು. ಅವ್ರು ಏನು ಓದಿದ್ದಾರೆ. ಭಾರತ ಮತ್ತು ಹಿಂದೂ ಸಮಾಜ ಒಡೆಯುವ ದೊಡ್ಡ ತಂಡ ಇದೆ. ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಆಕ್ರೋಶ ವ್ಯಕ್ತಪಡಿಸಿದರು.

ಮಾಧ್ಯಮದವರ ಜೊತೆ ಮಾತನಾಡಿದ ಅವರು, ಭಾರತದ ಜನರು ಒಂದಾಗಬೇಕು. ಈ ದೇಶ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಬ್ರಿಟಿಷರು ಇಲ್ಲಿಗೆ ಬರುವ ಮುನ್ನವೇ ಜ್ಞಾನಾರ್ಜನೆ ನಡೆಯುತಿತ್ತು. ಆದ್ರೆ, ಜೆಎನ್ ಯು ಪ್ರೊಫೆಸರ್ ಕರ್ನಾಟಕದ ಪಠ್ಯಪುಸ್ತಕದ ಬಗ್ಗೆ ಪತ್ರ ಬರೆಯುತ್ತಾರೆ ಎಂದರೆ ಇದಕ್ಕಿಂತ ಸಾಕ್ಷಿ ಬೇಕಾ? ನಾವು ಹೇಳುತ್ತಿದ್ದೆವು, ಅದು ಈಗ ಸಾಬೀತಾಗಿದೆ. ಪಾಕಿಸ್ತಾನದ ಧ್ವಜ ಹಾರಿಸುವ ಒಂದಷ್ಟು ಜನರು ಈ ತಂಡದಲ್ಲಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಬಸವಣ್ಣನವರ ಬಗ್ಗೆ ಏನು ಅವಹೇಳನವಾಗಿದೆ ಎಂದು ಹೇಳಬಹುದಾ? ಬರಗೂರು ರಾಮಚಂದ್ರಪ್ಪರಿದ್ದಾಗ ಇದ್ದ ಪಠ್ಯಕ್ರಮದಲ್ಲೇನಿತ್ತೋ ಅದೆೇ ಇದೆ. ಬುಕ್ ನಲ್ಲಿ ಇದ್ದ ಒಂದೇ ಒಂದು ವಾಕ್ಯ ಬದಲಾಯಿಸಿಲ್ಲ. ಜನಿವಾರದ ಬಗ್ಗೆ ಸ್ವಾಮೀಜಿಗಳು ಮಾತನಾಡಿಲ್ಲ. ಜನಿವಾರ ತೆಗೆದದ್ದು, ಇದ್ದದ್ದರ ಬಗ್ಗೆ ಪ್ರಶ್ನೆಯೇ ಇಲ್ಲ. ಉಪನಯನದ ಬಗ್ಗೆ ಉಲ್ಲೇಖಿಸಲಾಗಿದೆ. ಜನಿವಾರ ಕಿತ್ತಾಕಿ ಹೋದರೂ ಅಂತಾ ಇತ್ತು. ಉಪನಯನ ಮಾಡಿಕೊಂಡು ಹೋದರೂ ಎಂದಿದೆ. ಇದರಲ್ಲಿ ಅವಮಾನ ಮಾಡುವ ಪ್ರಶ್ನೆ ಎಲ್ಲಿ ಉದ್ಭವಿಸಿದೆ. ಸ್ವಾಮೀಜಿಯವರ ಸಲಹೆ ಆಧರಿಸಿ ಕ್ರಮ ಕೈಗೊಳ್ಳುತ್ತೇವೆ. ನಮಗೆ ಸ್ವಾಮೀಜಿಯವರ ಬಗ್ಗೆ ಅಪಾರ ಗೌರವ ಇದೆ. ಸಲಹೆ ಸ್ವೀಕರಿಸಿ ಮುಂದುವರಿಯುತ್ತೇವೆ ಎಂದು ಹೇಳಿದರು.

Edited By : Somashekar
PublicNext

PublicNext

14/06/2022 04:42 pm

Cinque Terre

56.85 K

Cinque Terre

4

ಸಂಬಂಧಿತ ಸುದ್ದಿ