ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ಲೂಫಿಲ್ಮಂ ದಂಧೆ : ಕುಂದ್ರಾ ವಿರುದ್ಧ ಶಿಲ್ಪಾ ಗರಂ

ಮುಂಬೈ: ಬ್ಲೂಫಿಲ್ಮಂ ಕೇಸ್ ನಲ್ಲಿ ಅಂದರ್ ಆಗಿರುವ ರಾಜ್ ಕುಂದ್ರಾ ಮಡದಿ ಶಿಲ್ಪಾ ಶೆಟ್ಟಿ ಪತಿಯ ಹೇಯ ಕೆಲಸಕ್ಕೆ ಧಿಕ್ಕಾರ ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಶ್ಲೀಲ ಚಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ರಾಜ್ ಕುಂದ್ರಾ ಅವರನ್ನು ಪೊಲೀಸರು ಬಂಧಿಸಿ ತನಿಖೆಗಾಗಿ ಮನೆಗೆ ಕರೆದೊಯ್ದಿದ್ದರು. ಈ ವೇಳೆ ಪೊಲೀಸರನ್ನು ಕಂಡ ಅವರ ಪತ್ನಿ ಶಿಲ್ಪಾ ಶೆಟ್ಟಿ ತೀವ್ರ ಆಕ್ರೋಶಗೊಂಡಿದ್ದರು. ಪತಿ ರಾಜ್ ಕುಂದ್ರಾ ಜೊತೆಗೆ ನಟಿ ಶಿಲ್ಪಾ ಶೆಟ್ಟಿ ಜೋರು ವಾಗ್ವಾದ ನಡೆಸಿ, ಜಗಳ ಕೂಡ ಮಾಡಿದ್ದರು ಎಂಬ ಮಾಹಿತಿ ಹೊರಬಿದ್ದಿದೆ.

ನಮಗೆ ಯಾವುದಕ್ಕೂ ಕಡಿಮೆ ಇಲ್ಲ ಉತ್ತಮ ಸ್ಥಿಸ್ಥಿತಿಯಲ್ಲಿದ್ದೇವೆ. ಆದಾಗ್ಯೂ ಯಾವುದಕ್ಕಾಗಿ ಇವೆಲ್ಲ ಮಾಡಿದಿರಿ...ನಿಮ್ಮ ಈ ಕೆಲಸದಿಂದ ಕುಟುಂಬದ ಗೌರವ ಹಾಳಾಗಿದೆ. ಉದ್ಯಮದಲ್ಲಿ ಇದ್ದಂತಹ ಪ್ರಾಜೆಕ್ಟ್ ಗಳು, ಜಾಹಿರಾತುಗಳು ರದ್ದಾಗುತ್ತಿವೆ. ಅನೇಕ ಯೋಜನೆಗಳನ್ನು ಕೈ ಬಿಡಬೇಕಾಗಿದೆ ಎಂದು ಶಿಲ್ಪಾ ಶೆಟ್ಟಿ ಪತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಶಿಲ್ಪಾ ವಿಚಾರಣೆ ಮಾಡಿದ್ದ ಅಧಿಕಾರಿಗಳು

'ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ರಾಜ್ ಕುಂದ್ರಾ ತಯಾರಿಸಿದ್ದು ಅಶ್ಲೀಲ ಸಿನಿಮಾಗಳಲ್ಲ, ಬರೀ ಕಾಮಪ್ರಚೋದಕ ಸಿನಿಮಾಗಳು ಅವರ ಆ್ಯಪ್ ನಲ್ಲಿರುವ ಸಿನಿಮಾಗಳು ಅಶ್ಲೀಲ ಸಿನಿಮಾಗಳಲ್ಲ, ಬದಲಾಗಿ ಇತರ ಓಟಿಟಿ ವೇದಿಕೆಯಲ್ಲಿರುವಂತಹ ಕಾಮಪ್ರಚೋದಕ ಸಿನಿಮಾಗಳಷ್ಟೇ' ಎಂದು ಶಿಲ್ಪಾ ಪೊಲೀಸರಿಗೆ ಹೇಳಿಕೆ ನೀಡಿದ್ದರು.

ಆದರೆ, ಪೋಲಿಸರು ವಶಪಡಿಸಿಕೊಂಡಿರುವ ಕೆಲ ದಾಖಲೆಗಳಲ್ಲಿ ಶಿಲ್ಪಾ ಅವರ ಸಹಿ ಕೂಡ ಇರುವುದು ಪತ್ತೆಯಾಗಿದೆ. ಹಾಗಾಗಿ, ಅವರನ್ನು ಇನ್ನೊಮ್ಮೆ ವಿಚಾರಣೆ ಮಾಡುವ ಸಾಧ್ಯತೆಗಳಿವೆ.

Edited By : Nirmala Aralikatti
PublicNext

PublicNext

28/07/2021 02:31 pm

Cinque Terre

46.57 K

Cinque Terre

1

ಸಂಬಂಧಿತ ಸುದ್ದಿ