ಬೆಂಗಳೂರು: ಯುವರಾಜ್ ನಟಿ ರಾಧಿಕಾ ಖಾತೆಗೆ ಕೋಟ್ಯಾಂತರ ರೂ. ಹಣ ವರ್ಗಾವಣೆ ಮಾಡಿದ್ದಾನೆಂಬ ಆರೋಪದ ಮೇಲೆ ಇಂದು ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೀಡಿದ್ದ ನೋಟಿಸ್ ಹಿನ್ನೆಲೆಯಲ್ಲಿ ಇಂದು ರಾಧಿಕಾ ವಿಚಾರಣೆಗೆ ಹಾಜರಾಗಿದ್ದಾರೆ.
ಹಣ ವಂಚಕ ಯುವರಾಜ್ ಸ್ವಾಮಿ ಪರಿಚಯ, ಸಿನಿಮಾ ಕುರಿತಾದ ಮಾತುಕತೆ, ಯುವರಾಜ್ ಜೊತೆಗಿನ ಹಣಕಾಸು ಸಂಬಂಧ, ಹಣಕಾಸು ವ್ಯವಹಾರಗಳು ಇನ್ನಿತರೆ ವಿಷಯಗಳ ಬಗ್ಗೆ ಸಿಸಿಬಿ ಪೊಲೀಸರು ರಾಧಿಕಾ ಕುಮಾರಸ್ವಾಮಿ ಅನ್ನು ವಿಚಾರಣೆ ನಡೆಸಲಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಧಿಕಾ ಕುಮಾರಸ್ವಾಮಿ ಸಹೋದರ ರವಿರಾಜ್ ಅನ್ನು ಕೆಲವು ದಿನಗಳ ಹಿಂದೆ ಸಿಸಿಬಿ ವಿಚಾರಣೆ ನಡೆಸಿದ್ದರು.
ಆರ್ ಆರ್ ಆರ್ ಮುಖಂಡನ ಹೆಸರಿನಲ್ಲಿ ನಿಗಮ ಮಂಡಳಿಗಳಲ್ಲಿ ಅಧಿಕಾರ ಕೊಡಿಸುವುದಾಗಿ, ರಾಜ್ಯಪಾಲರನ್ನಾಗಿ ಮಾಡುವುದಾಗಿ ಸುಳ್ಳು ಹೇಳಿ ಹಲವರಿಂದ ಕೋಟ್ಯಂತರ ಹಣವನ್ನು ವಸೂಲಿ ಮಾಡಿದ್ದ ಯುವರಾಜ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಆತನ ಖಾತೆಯಿಂದ ರಾಧಿಕಾ ಕುಮಾರಸ್ವಾಮಿ ಖಾತೆಗೆ ಹಣ ವರ್ಗಾವಣೆ ಆಗಿದ್ದ ಕಾರಣ ರಾಧಿಕಾ ಅವರನ್ನು ಸಿಸಿಬಿ ವಿಚಾರಣೆ ನಡೆಸುತ್ತಿದೆ.
ಸಿಸಿಬಿಯ ಎಸಿಪಿ ನಾಗರಾಜ್ ಹಾಗೂ ಮಹಿಳಾ ಅಧಿಕಾರಿಗಳಿರುವ ತಂಡದಿಂದ ರಾಧಿಕಾ ಕುಮಾರಸ್ವಾಮಿ ಅವರ ವಿಚಾರಣೆ ನಡೆಯುತ್ತಿದೆ.
PublicNext
08/01/2021 02:26 pm