ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟ್ವಿಟ್ಟರ್‌ನಲ್ಲಿ ಪರಿಚಯವಾದ 9 ಹುಡುಗಿಯರನ್ನ ತುಂಡು ತುಂಡಾಗಿ ಕತ್ತರಿಸಿದ ಪಾಪಿಗೆ ಮರಣದಂಡನೆ

ಟೋಕಿಯೋ: ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಪರಿಚಯವಾದ ಒಂಬತ್ತು ಯುವತಿಯರನ್ನ ತುಂಡು ತುಂಡಾಗಿ ಕತ್ತರಿಸಿದ ಪಾಪಿ ಈಗ ಮರಣದಂಡನೆಗೆ ಗುರಿಯಾಗಿದ್ದಾನೆ.

ಜಪಾನ್‌ನ 30 ವರ್ಷದ ತಕಾಹಿರೋ ಶಿರೈಶಿ ಮರಣದಂಡನೆಗೆ ಗುರಿಯಾದ ಕ್ರೂರಿ. ತಕಾಹಿರೋ ಕೃತ್ಯ ಇಡೀ ಮನುಕುವನ್ನೇ ಬೆಚ್ಚಿ ಬೀಳುವಂತೆ ಮಾಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಕುರಿತು ಮಾತನಾಡುವ ಯುವತಿಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ ತಕಾಹಿರೋ ಶಿರೈಶಿ, ಆತ್ಮಹತ್ಯೆಯ ವಿಧಾನಗಳನ್ನು ತಿಳಿಸುವುದಾಗಿ ಹೇಳುತ್ತಿದ್ದ. ಅಷ್ಟೇ ಅಲ್ಲದೇ ತಾನೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕೊನೆಗೆ ಅವರನ್ನು ಕೊಂದು ತುಂಡು ತುಂಡಾಗಿ ಕತ್ತರಿಸುತ್ತಿದ್ದ.

ಶಿರೈಶಿ ಒಟ್ಟು 9 ಹುಡುಗಿಯರನ್ನು ಕೊಲೆ ಮಾಡಿದ್ದ. ಕೊನೆಗೂ ಈತನ ಕೃತ್ಯವನ್ನು ಪತ್ತೆಹಚ್ಚುವಲ್ಲಿ ಟೋಕಿಯೋ ಪೊಲೀಸರು ಯಶಸ್ವಿಯಾಗಿದ್ದು, ಈತನನ್ನು ಬಂಧಿಸಿ ನ್ಯಾಯಾಲಕ್ಕೆ ಹಾಜರುಪಡಿಸಿದ್ದರು.

ಸುದೀರ್ಘ ವಿಚಾರಣೆ ನಡೆದ ಬಳಿಕ ತಕಾಹಿರೋ ಶಿರೈಶಿ ತಪ್ಪಿತಸ್ಥ ಎಂದಿರುವ ಟೋಕಿಯೋ ನ್ಯಾಯಾಲಯ, ಈತನಿಗೆ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ವಿಚಿತ್ರವೆಂದರೆ ವಿಚಾರಣೆ ವೇಳೆ ಆರೋಪಿಯು ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ತನಗೆ ಉಗ್ರ ಶಿಕ್ಷೆ ನೀಡುವಂತೆ ನ್ಯಾಯಾಧೀಶರಿಗೆ ಮನವಿ ಮಾಡಿದ್ದ.

Edited By : Vijay Kumar
PublicNext

PublicNext

15/12/2020 11:25 pm

Cinque Terre

82.03 K

Cinque Terre

2