ಒಳಾಂಗಣ ವಿನ್ಯಾಸಕಾರ ಅನ್ವಯ್ ನಾಯ್ಕ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ರಿಪಬ್ಲಿಕ್ ಟಿವಿಯ ಸಂಪಾದಕ ಅರ್ನಬ್ ಗೋಸ್ವಾಮಿ ಕೂಡ ಬಂಧಿತರಾಗಿದ್ದಾರೆ.
ಈಗಾ ನಕಲಿ ಟಿ ಆರ್ ಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿಯ ಹಂಚಿಕೆ ವಿಭಾಗದ ಮುಖ್ಯಸ್ಥ ಘನಶ್ಯಾಮ್ ಸಿಂಗ್ ಅರೆಸ್ಟ್ ಮಾಡಲಾಗಿದೆ.
ಇದರೊಂದಿಗೆ ಪ್ರಕರಣದಲ್ಲಿ ಇಲ್ಲಿಯವರೆಗೆ 12 ಜನರನ್ನು ಬಂಧಿಸಿದಂತಾಗಿದೆ.
ಟಿಆರ್ ಪಿ ಹಗರಣದ ತನಿಖೆ ಮುಂದುವರಿದಿದ್ದು, ಹಲವು ವೀಕ್ಷಕರು ತಮಗೆ ರಿಪಬ್ಲಿಕ್ ಟಿವಿಯನ್ನು ಆನ್ ಇಡಲು ಹಣ ನೀಡಲಾಗಿತ್ತು ಎಂಬುದನ್ನು ಪೊಲೀಸರು ಹಾಗೂ ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದಾರೆ.
ಪ್ರಕರಣದಲ್ಲಿ 'ಫಕ್ತ್ ಮರಾಠಿ' ಮತ್ತು 'ಬಾಕ್ಸ್ ಸಿನಿಮಾಸ್' ವಾಹಿನಿಗಳ ವಿರುದ್ಧವೂ ದೂರು ದಾಖಲಾಗಿದೆ.
PublicNext
10/11/2020 02:10 pm