ಹಣೆಬರಹ ಗಟ್ಟಿಯಾಗಿದ್ರೆ ಯಮನೇ ಬಂದ್ರು ಏನೂ ಮಾಡುವುದಕ್ಕೆ ಆಗಲ್ಲ ಎನ್ನುವ ಮಾತುಗಳನ್ನು ಆಗಾಗ ಕೇಳ್ತಿವಿ. ಹಾಗೇ ಸಾಮಾಜಿಕ ಜಾಲತಾಣದಲ್ಲಿ ಸದ್ಯ ಒಂದು ವಿಡಿಯೋ ವೈರಲ್ ಆಗಿದ್ದು ಪರಮಾತ್ಮನೆ ಬಂದು ಈ ವ್ಯಕ್ತಿ ಕಾಪಾಡಿದ್ನಾ ಅನ್ನುವ ಹಾಗೆ ಆ ವ್ಯಕ್ತಿ ನಿಟ್ಟುಸಿರು ಬಿಟ್ಟಿದ್ದಾನೆ.
ಹೌದು ವ್ಯಕ್ತಿ ಒಬ್ಬ ರಸ್ತೆಯ ಪಕ್ಕದಲ್ಲಿ ಬೈಕ್ ಮೇಲೆ ಕುಳಿತುಕೊಂಡಿರುತ್ತಾನೆ. ವ್ಯಕ್ತಿಯ ರಸ್ತೆ ಹಿಂಬದಿಯಿಂದ ಜೆಸಿಬಿ ಒಂದು ವೇಗವಾಗಿ ಬರುತ್ತೆ, ಅದೇ ರೀತಿ ಮುಂಭಾಗದಿಂದ ಕಾರ್ ಒಂದು ವೇಗವಾಗಿ ಬಂದು ಮುಖಾಮುಖಿ ಡಿಕ್ಕಿ ಸಂಭವಿಸುತ್ತದೆ. ಅನಾಹುತ ತಪ್ಪಿಸಲು ಇಬ್ಬರು ಬ್ರೇಕ್ ಮಾಡುತ್ತಾರೆ, ಆದರೆ ಕಾರ್ ಸಂಪೂರ್ಣ ನಜ್ಜುಗುಜ್ಜಾಗಿ ರಸ್ತೆಯ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಗೆ ತಾಗುತ್ತದೆ ಆದ್ರೆ ಆ ವ್ಯಕ್ತಿ ಪ್ರಾಣಾಪಾದಿಂದ ಜಸ್ಟ್ ಮಿಸ್ ಆಗುತ್ತಾನೆ. ಪರಮಾತ್ಮನನ್ನು ನೆನೆಯುತ್ತ ಆ ವ್ಯಕ್ತಿ ನಿಟ್ಟುಸಿರು ಬಿಟ್ಟು ಓಟ ಕಿತ್ತಿದ್ದಾನೆ. ವಿಡಿಯೋ ಹಳೆಯದಾದರೂ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ. ದೇವರೆ ಈ ವ್ಯಕ್ತಿಯನ್ನು ಕಾಪಾಡಿದ್ದಾನೆ ಎಂದು ಬರೆದು ಕೊಳ್ಳುತ್ತಿದ್ದಾರೆ.
PublicNext
27/08/2022 05:33 pm