ದೆಹಲಿ : ವಾಯು ಮಾಲಿನ್ಯಕ್ಕೆ ಹೆಸರಾದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜನದಟ್ಟನೆಗಿಂತಲೂ ಹೆಚ್ಚಾಗಿ ವಾಹನ ದಟ್ಟನೆಯನ್ನು ಕಾಣಬಹುದು.ಹೀಗೆ ಜನನಿಬಿಡ ರಸ್ತೆಯಲ್ಲಿ ವೇಗವಾಗಿ ಚಲಿಸುತ್ತಿದ್ದ ಕಾರನ್ನು ನಿಲ್ಲಿಸಲು ಟ್ರಾಫಿಕ್ ಪೊಲೀಸ್ ಪ್ರಯತ್ನಿಸಿದ್ದಾರೆ.
ಆದರೆ, ಕಾರಿನ ಚಾಲಕ ವಾಹನವನ್ನು ನಿಲ್ಲಿಸದಿದ್ದಾಗ ಪೊಲೀಸ್ ಸಿಬ್ಬಂದಿ ಕಾರನ್ನು ತಡೆದು ನಿಲ್ಲಿಸಲು ಪ್ರಯತ್ನಿಸಿದ್ದಾರೆ ಕಾರಿನ ಬಾನೆಟ್ ಮೇಲೆ ಸುಮಾರು 400 ಮೀಟರ್ ದೂರದ ವರೆಗೆ ಎಳೆಯಲ್ಪಟ್ಟು ಕೊನೆಗೆ ಅವರು ಕೆಳಗೆ ಬಿದ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕೆಳಗೆ ಬಿದ್ದ ಟ್ರಾಫಿಕ್ ಪೊಲೀಸ್ ಕಾಲು ಕಾರಿನ ಚಕ್ರದಲ್ಲಿ ಸಿಲುಕುವುದರಿಂದ ಸ್ವಲ್ಪದರಲ್ಲೇ ಪಾರಾಗಿರುವುದು ದೃಶ್ಯದಲ್ಲಿ ಕಾಣಬಹುದಾಗಿದೆ.ಇನ್ನೂ ಈ ಘಟನೆ ಕಳೆದ ಸೋಮವಾರ ದಕ್ಷಿಣ ದೆಹಲಿಯ ಧೌಲಾ ಕುವಾನ್ ಎಂಬಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
PublicNext
15/10/2020 03:43 pm