ಪಬ್ಲಿಕ್ ನೆಕ್ಸ್ಟ್ ವಿಶೇಷ : ಕೇಶವ ನಾಡಕರ್ಣಿ
ಕೊಟ್ಟವ ಕೋಡಂಗಿ ಇಸ್ಕೊಂಡವ ಈರಭದ್ರ ಎಂಬ ಗಾದೆಯನ್ನು ಕೆಲವು Onlie ಕಂಪನಿಗಳು ಸಾಬೀತುಗೊಳಿಸ ತೊಡಗಿವೆ. ಕಡಿಮೆ ಹಣದಲ್ಲಿ ಪ್ರತಿಷ್ಠಿತ Jio, airtel,idea,Vodafone, ಕಂಪನಿಗಳ ಹೆಸರಲ್ಲಿ ಮೊಬೈಲ್ ಹಾಗೂ ಡಾಟಾ ಕಾರ್ಡ್ ಮತ್ತು DTH, Tata Sky ರಿಚಾರ್ಜ್ ಮಾಡುವುದಾಗಿ ಹೇಳಿ ಅಮಾಯಕರಿಗೆ ಟೋಪಿ ಹಾಕಿದ shaverecharge ಮತ್ತು shavecash.live ಸೈಟ್ ಗಳು ಸಧ್ಯಕ್ಕೆ ಡೆಡ್ ಆಗಿವೆ.
ಯಾವುದೇ ಸಿಮ್ಗೆ 1 ವರ್ಷ ವ್ಯಾಲಿಡಿ ಎಂದು ಭರವಸೆ ನೀಡುವ ಮೂಲಕ ಅವರು ಲಕ್ಷಾಂತರ ಜನರಿಂದ 1250 ರೂ ಪಡೆದು 3 ತಿಂಗಳ ನಂತರ ಅವು ಮಾಯವಾಗಿವೆ. ಇದು ಚೈನ್ ವ್ಯವಹಾರವಾಗಿದ್ದರಿಂದ ಅನೇಕರು ಮುಖಬೆಲೆಯ ಮೇಲೆ ವ್ಯವಹಾರ ಮಾಡಿ ಕೈಸುಟ್ಟುಕೊಂಡಿದ್ದಾರೆ.
ಏನೂ ಅರಿಯದೆ ಕಡಿಮೆ ದರದಲ್ಲಿ ಒಂದು ವರ್ಷದ ರಿಚಾರ್ಜ ದೊರೆಯಲಿದೆ ಎಂಬ ಆಸೆಯಿಂದ ಪ್ಲ್ಯಾನ್ ಖರೀದಿಸಿದವರಿಂದ ಹಣ ಸಂಗ್ರಹಿಸಿ ಪಡೆದು ಏನೇನೋ ಸಬೂಬು ಹೇಳುತ್ತ ಉಲ್ಟಾ ಹೊಡೆದ್ದಾರೆ. ಅಂದರೆ ಇದು Service & Product ಆಧಾರಿತ ಕಂಪನಿಯಾಗಿದೆ ಹೀಗಾಗಿ ಮೊದಲಿನ ಎಲ್ಲ ಪ್ಲಾನ್ ಬಂದ ಆಗಿದೆ. ಎಲ್ಲರೂ ನಿಯಮಾವಳಿ ಪ್ರಕಾರ ಹೊಸ ಪ್ಲ್ಯಾನ್ ಪಡೆದರೆ ಮಾತ್ರ ರಿಚಾರ್ಜ್ ಸೌಲಭ್ಯ ದೊರೆಯಲಿದೆ ಎಂದು ಹೇಳುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ.
Plan ಪಡೆದ ಲಕ್ಷಾಂತರ ಜನ ಸಂಶಯಗೊಂಡು ಪ್ರಮೋಟರುಗಳು, ಏಜೆಂಟರುಗಳ ಪ್ರಶ್ನಿಸ ತೊಡಗಿದಾಗ ಕಂಪನಿಯು ಮೊದಲಿನ ಸೈಟ್ ಮತ್ತು Plan ಬಂದ್ ಮಾಡಿದ 15 ದಿನಗಳ ನಂತರ ಹೊಸ ಯೋಜನೆಯನ್ನು ತಂದಿದ್ದಾರೆ. ಅಂದರೆ ಅವರ ಜಾಲ ಹೇಗಿದೆ ನೋಡಿ, ನಿಮಗೆ ರಿಚಾರ್ಜ್ ಬೇಕಾದರೆ ನೀವು ಬೇರೆಯವರಿಂದ 1999 ರೂ ಪಡೆದು ಅವರಿಗೆ ಟೋಪಿ ಹಾಕಿ ಎಂಬಂತಿದೆ ಇವರ ಪ್ಲ್ಯಾನ್.
ಅಂದರೆ ಈಗಾಗಲೆ 1250 ರೂ ಕೊಟ್ಟು ನೋಂದಣಿ ಮಾಡಿದವರು 1999 ರೂ ಪಡೆದು ತಮ್ಮ ಕೆಳಗೆ ಒಬ್ಬ ವ್ಯಕ್ತಿಯನ್ನು ಸೇರಿಸಿದ ನಂತರ ಮೊದಲಿನ ವ್ಯಕ್ತಿಗೆ 1 ವರ್ಷ ರೀಚಾರ್ಜ್ ನೀಡಲಾಗುವುದು ಎಂಬ ಷರತ್ತು ಹಾಕಿ ಇತರರನ್ನೂ ಈ ಜಾಲದಲ್ಲಿ ಸಿಕ್ಕಿಸುವ ಪ್ರಯತ್ನ ನಡೆದಿದೆ. ಅಂದರೆ ಹೊಸದಾಗಿ ಸೇರುವವರಿಗೆ ಏನೋ ಉಡುಗೊರೆ ನೀಡಲಾಗುತ್ತಿದೆ ಎಂದು ಈಗ ಕಂಪನಿ ಪ್ರತಿನಿಧಿಗಳು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಆದರೆ ಆದದ್ದೇನು ಗೊತ್ತೆ? 1250 ರೂದಲ್ಲಿ ತಮಗೆ ಒಂದು ವರ್ಷದ ರಿಚಾರ್ಜ್ ಸಿಗಬಹುದೆಂಬ ಆಸೆಯಿಂದ ಕೆಲವರು ಸ್ನೇಹಿತರು ಹಾಗೂ ಸಂಬಂಧಿಕರಿಂದ 1999 ರೂ ಪಡೆದು ತಮ್ಮಕೆಳಗೆ ಸದಸ್ಯತ್ವ ಮಾಡಿಸಿದವರು ಪರದಾಡುವಂತಾಗಿದೆ. ಚೈನ್ ಸಿಸ್ಟಿಂದಲ್ಲಿ ಸದಸ್ಯತ್ವ ಪಡೆದವರು ಮೂಲಕ ಏಜಂಟರು ಹಾಗೂ ಪ್ರಮೋಟರುಗಳನ್ನು ಬಿಟ್ಟು ಇವರನ್ನು ಹಿಡಿದು ತದಕುತ್ತಿದ್ದಾರೆ.
ಮಂಗಳೂರು ಹಾಗೂ ಶಿವಮೊಗ್ಗ ಕಡೆಯವರೆಂದು ಕೆಲವರು ಪ್ರಮುಖ ಪ್ರಮೋಟರ್ ಎನ್ನಲಾಗುತ್ತಿದೆ. ಸುಮೀತ್ ಎಂಬ ವ್ಯಕ್ತಿ ದಿಲ್ಲಿಯಲ್ಲಿ ಕುಳಿತು ಕರ್ನಾಟಕದ ವ್ಯವಹಾರಗಳನ್ನು ನಿಯಂತ್ರಿಸುತ್ತಿದ್ದ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ವ್ಯಕ್ತಿಗಳಿಗೆ ಕರೆ ಮಾಡಿದರೆ ಒಬ್ಬ ಸಂಪರ್ಕಕ್ಕೆ ಸಿಗುತ್ತಿಲ್ಲ ಹಾಗೂ ಇನ್ನೊಬ್ಬ ತನಗೂ ಇದಕ್ಕೂ ಸಂಬಂಧವಿಲ್ಲದಂತೆ ಜಾರಿಕೊಳ್ಳುತ್ತಿದ್ದಾನೆ.
ಸದಸ್ಯತ್ವ ಪಡೆದವರ ಈ ಪ್ರಶ್ನೆಗಳಿಗೆ ಕಂಪನಿ ಉತ್ತರಿಸುವುದೆ?
*ಮೊದಲಿನ ವೈಬ್ ಸೈಟ್ ಬಂದ್ ಮಾಡಿ ಹೊಸ ವೆಬ್ ಸೈಟ್ ಪ್ರಾರಂಭಿಸಿದ್ದೇಕೆ?
*ಯೋಜನೆ ಆರಂಭದ ಮುನ್ನ ಈ ಎಲ್ಲ ನಿಬಂಧನೆಗಳನ್ನು ಸದಸ್ಯರಿಗೆ ತಿಳಿಸಲಾಗಿತ್ತೆ
* ರಿಚಾರ್ಜ್ ಸೌಲಭ್ಯ ನೀಡುವುದಾಗಿ ಹೇಳುವ ಮುನ್ನ ಪ್ರತಿಷ್ಠಿತ Jio, airtel,idea,Vodafone ಅನುಮತಿ ಪಡೆಯಲಾಗಿತ್ತೆ?
*ಪ್ಲ್ಯಾನ ಪಡೆದವರು ಹೆಚ್ಚಾಗಿ ಮಧ್ಯಮ ಹಾಗೂ ಕಾರ್ಮಿಕ ವರ್ಗದವರಿರಬಹುದು, ಅವರಿಗೆ ಕೇವಲ ಕಡಿಮೆ ದರದಲ್ಲಿ ರಿಚಾರ್ಜ್ ದೊರೆಯಬಹುದು ಎಂಬ ಆಸೆ ಇರುತ್ತದೆ. ನಿಮ್ಮ ನಿಬಂಧನೆಗಳನ್ನು ಅವರು ಓದದಿರ ಬಹುದು. ಅದನ್ನು ಅವರಿಗೆ ತಿಳಿಸುವ ಪ್ರಯತ್ನ ನಡೆದಿದೆಯೆ?
ತಮಗಾದ ತೊಂದರೆಯನ್ನು ಪ್ರಮೋಟರುಗಳು ಹಾಗೂ ಕೆಲವು ಏಜೆಂಟರುಗಳೊಂದಿಗೆ ಹಂಚಿಕೊಂಡಿದ್ದಾರೆ. ಬನ್ನಿ ಅವರಿಂದಲೇ ಕೇಳೋಣ.
ಮಲ್ಟಿ ಲೆವೆಲ್ ಮಾರ್ಕೆಟಿಂಗ್ ಅಥವಾ ಪಿರ್ಯಾಮಿಡ್ ನೆಟ್ ವರ್ಕಿಂಗ್ ಬಗ್ಗೆ ಕಾನೂನು ಏನು ಹೇಳುತ್ತೆ, ಗ್ರಾಹಕರು ಏಜೆಂಟರು ಅಥವಾ ಪ್ರಮೋಟರುಗಳು ಯಾವ ರೀತಿ ಜಾಗರೂಕರಾಗಿರಬೇಕು ಎಂಬ ಬಗ್ಗೆ ವಿವರಣೆ ನೀಡಲಿದೆ ನಿಮ್ಮ PublicNext.
PublicNext
10/10/2020 03:55 pm