ಕೀವ್: ಉಕ್ರೇನ್ ಮೇಲೆ ರಷ್ಯಾ ಸೇನೆಯ ದಾಳಿ ಇನ್ನೂ ಮುಂದುವರೆದಿದೆ. ದಾಳಿಯಲ್ಲಿ ಅಮೆರಿಕ ಮೂಲದ ಮತ್ತೋರ್ವ ಪತ್ರಕರ್ತ ಮೃತಪಟ್ಟಿದ್ದಾರೆ.
ಫಾಕ್ಸ್ ನ್ಯೂಸ್ ಸುದ್ದಿ ಸಂಸ್ಥೆಯ ಛಾಯಾಗ್ರಾಹಕ ಪೀರೆ ಜಕ್ರಜಸೆಕಿ ಅವರು ದುರಂತ ಅಂತ್ಯ ಕಂಡಿದ್ದಾರೆ. ಘಟನೆಯಲ್ಲಿ ಪೀರೆ ಅವರ ಸಹೋದ್ಯೋಗಿ ಬೆಂಜಮಿನ್ ಹಾಲ್ ಅವರು ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಪೀರೆ ಅವರು ಯುದ್ಧ ವಲಯದ ಛಾಯಾಗ್ರಾಹಕರಾಗಿದ್ದರು. ಈ ಮುಂಚೆ ಅವರು ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ದಾಳಿ ವೇಳೆ ಕರ್ತವ್ಯ ನಿರ್ವಹಿಸಿದ್ದರು. ಇರಾಕ್ ಹಾಗೂ ಸಿರಿಯಾದಲ್ಲೂ ಕೆಲಸ ಮಾಡಿದ್ದರು.
PublicNext
16/03/2022 01:43 pm