ಮಾಸ್ಕೊ: ರಷ್ಯಾದ ಕೆಮೆರೊವೊ ಎಂಬಲ್ಲಿನ ಕಲ್ಲಿದ್ದಲು ಗಣಿಯಲ್ಲಿ ದಟ್ಟ ಹೊಗೆ ಆವರಿಸಿದ ಪರಿಣಾಮವಾಗಿ ಕಾರ್ಮಿಕರು, ರಕ್ಷಣಾ ತಂಡದ 6 ಸಿಬ್ಬಂದಿ ಸೇರಿ ಒಟ್ಟು 52 ಜನ ಸಾವನ್ನಪ್ಪಿದ್ದಾರೆ.
ಈಗಾಗಲೇ 14 ಶವಗಳ ಪತ್ತೆಯಾಗಿದ್ದು, ವಿಷಕಾರಿ ಹೊಗೆಯ ಕಾರಣದಿಂದಾಗಿ ಕಾಣೆಯಾದ 38 ಮಂದಿ ಹುಡುಕಾಟ ನಿಲ್ಲಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನೈರುತ್ಯ ಸೈಬೀರಿಯಾದ ಕೆಮೆರೊವೊ ಪ್ರದೇಶದ ಲಿಸ್ಟ್ವ್ಯಾಜ್ನಾಯದ ಗಣಿಯಲ್ಲಿ ಒಟ್ಟು 285 ಜನರು ಕಾರ್ಯ ನಿರ್ವಹಿಸುತ್ತಿದ್ದರು. ಮೀಥೇನ್ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡಿದ್ದು, ವಿಷಕಾರಿ ಹೊಗೆ ದಟ್ಟವಾಗಿ ಆವರಿಸತೊಡಗಿತು. ಕೂಡಲೇ ರಕ್ಷಣಾ ಸಿಬ್ಬಂದಿಯು 239 ಗಣಿಗಾರರನ್ನು ಬೆಂಕಿ ಅವಘಡ ಸ್ಥಳದಿಂದ ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಿದರು. ಈ ವೇಳೆ 49 ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
PublicNext
26/11/2021 08:37 am