ಫ್ಲೋರಿಡಾ(ಅಮೆರಿಕ): ಪ್ರಚಾರ ಸಿಗುತ್ತೆ ಅಂತ ಜನ ಏನೇನೋ ಹುಚ್ಚಾಟಗಳನ್ನ ಮಾಡ್ತಾರೆ. ಆದ್ರೆ ಇಲ್ಲೊಬ್ಬ ಗಾಯಕಿ ವೇದಿಕೆ ಮೇಲೆ ಪ್ಯಾಂಟ್ ಬಿಚ್ಚಿ ತನ್ನ ಅಭಿಮಾನಿಯ ಮೈ ಮೇಲೆ ಮೂತ್ರ ಮಾಡಿದ್ದಾಳೆ.
ಇದರ ವಿಡಿಯೋ ಈಗ ವೈರಲ್ ಆಗ್ತಾ ಇದೆ. ಮತ್ತು ನೆಟ್ಟಿಗರು ಕೆರಳಿದ ಕೆಂಡವಾಗಲು ಇದು ಕಾರಣವಾಗಿದೆ. ಕಳೆದ ವಾರ ಫ್ಲೋರಿಡಾದ ಡೇಟೋನಾ ಬೀಚ್ ನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಗಾಯಕಿ ಸೋಫಿಯಾ ಉರಿಸ್ಟಾ ತನ್ನ ಅಭಿಮಾನಿಯೊಬ್ಬನನ್ನು ವೇದಿಕೆ ಮೇಲೆ ಕರೆದಿದ್ದಾಳೆ. ವೇದಿಕೆ ಮೇಲೆ ಮಲಗುವಂತೆ ಆತನಿಗೆ ಹೇಳಿ ಪ್ಯಾಂಟ್ ಬಿಚ್ಚಿ ಆತನ ಮೇಲೆ ಮೂತ್ರ ಮಾಡಿದ್ದಾಳೆ. ಹಾಡು ಹೇಳುತ್ತಲೇ ಇದೆಲ್ಲವನ್ನೂ ಮಾಡಿ ಮುಗಿಸಿದ ವಿಡಿಯೋ ವೈರಲ್ ಆಗುತ್ತಿದೆ. ಇದಕ್ಕೆ ನೆಟ್ಟಿಗರಿಂದ ತೀವ್ರ ವಿರೋಧ ವ್ಯಕ್ತವಾದ ನಂತರ ಘನಂದಾರಿ ಗಾಯಕಿ ಸೋಫಿಯಾ ಉರಿಸ್ಟಾ ಕ್ಷಮೆ ಕೇಳಿದ್ದಾಳೆ.
PublicNext
20/11/2021 04:21 pm