ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾಕ್‌ ಬುಡಕಟ್ಟು ಜನರ ನಡುವೆ ಸಂಘರ್ಷ: 15 ಮಂದಿ ಸಾವು

ಇಸ್ಲಾಮಾಬಾದ್: ವಿವಾದಿತ ಅರಣ್ಯ ಭೂಮಿ ಸ್ವಾಧೀನಕ್ಕಾಗಿ ವಾಯುವ್ಯ ಪಾಕಿಸ್ತಾನದಲ್ಲಿ ಸ್ಥಳೀಯ ಬುಟಕಟ್ಟು ಜನರ ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಕಳೆದ ಮೂರು ದಿನಗಳಲ್ಲಿ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ. ಇನ್ನು ಹತ್ತಾರು ಜನರು ಗಾಯಗೊಂಡಿದ್ದು, ಬುಡಕಟ್ಟು ಪ್ರದೇಶಗಳಲ್ಲಿ ಸೋಮವಾರ ಭದ್ರತೆ ಹೆಚ್ಚಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಕುರಂನ ಜಿಲ್ಲಾ ಪೊಲೀಸ್ ಅಧಿಕಾರಿ, "ಪೆವಾರ್ ಬುಡಕಟ್ಟು ಜನರು ಮತ್ತು ಕುರ್ರಂ ಜಿಲ್ಲೆಯ ತೇರಿ ಮೆಗೆಲ್ ಗ್ರಾಮಕ್ಕೆ ಸೇರಿದ ಗೈಡು ಬುಡಕಟ್ಟು ಜನರ ನಡುವೆ ಶನಿವಾರ ಮಧ್ಯಾಹ್ನ ಘರ್ಷಣೆ ಆರಂಭವಾಗಿತ್ತು. ಎರಡೂ ಕಡೆಯ 100ಕ್ಕೂ ಹೆಚ್ಚು ಜನರು ಬಂದೂಕುಗಳಿಂದ ದಾಳಿ ನಡೆಸಿದ್ದಾರೆ. ಬಂದೂಕುಧಾರಿಗಳು ಭಾರಿ ಶಸ್ತ್ರಾಸ್ತ್ರಗಳು ಮತ್ತು ರಾಕೆಟ್ ಲಾಂಚರ್‌ಗಳನ್ನು ಸಹ ಬಳಸಿದ್ದಾರೆ. ಇದರಿಂದ ಶನಿವಾರ ನಾಲ್ಕು ಜನರು ಮೃತಪಟ್ಟಿದ್ದರು. ಭಾನುವಾರ ಮತ್ತು ಸೋಮವಾರ 11 ಮಂದಿ ಮೃತಪಟ್ಟಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ.

ಕುರ್ರಂ ಜಿಲ್ಲಾಡಳಿತವು ವದಂತಿಗಳು ಹರಡದಂತೆ ತಡೆಯಲು ಖೈಬರ್ ಪಖ್ತುಂಖ್ವಾದಲ್ಲಿ ದೂರವಾಣಿ ಸಂಪರ್ಕ ಸೇವೆಗಳನ್ನು ಸ್ಥಗಿತಗೊಳಿಸಿದೆ. ಕಾದಾಟ ನಡೆಸುತ್ತಿರುವ ಗುಂಪುಗಳ ನಡುವೆ ಕದನ ವಿರಾಮಕ್ಕೆ ಸೇನೆ ಮತ್ತು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ವಿವಾದಿತ ಪ್ರದೇಶದಿಂದ ಉರುವಲು ಸಂಗ್ರಹಿಸುವುದನ್ನು ನಿರ್ಬಂಧಿಸಲಾಗಿದೆ.

Edited By : Vijay Kumar
PublicNext

PublicNext

25/10/2021 07:22 pm

Cinque Terre

47.83 K

Cinque Terre

0