ಇಸ್ಲಾಮಾಬಾದ್: ಶಿಯಾ ಮುಸ್ಲಿಮರು ಮೆರವಣಿಗೆ ಮೇಲೆ ಬಾಂಬ್ ದಾಳಿ ನಡೆಸಿದ ಪರಿಣಾಮ ಮೂವರು ಮಂದಿ ಮೃತಪಟ್ಟ ಭೀಕರ ಘಟನೆ ಪಾಕಿಸ್ತಾನದ ಪೂರ್ವ ಪಂಜಾಬ್ ಪ್ರಾಂತ್ಯದ ಬಹವಾಲ್ ನಗರದಲ್ಲಿ ಇಂದು ನಡೆದಿದೆ. ಈ ದುರ್ಘಟನೆಯಲ್ಲಿ 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಬಾಂಬ್ ಸ್ಫೋಟಗೊಂಡ ಸ್ಥಳಕ್ಕೆ ಪೊಲೀಸರು ಮತ್ತು ಆಂಬುಲೆನ್ಸ್ ದೌಡಾಯಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಗಾಯಗೊಂಡ ಜನರು ರಸ್ತೆ ಬದಿಯಲ್ಲಿ ಸಹಾಯಕ್ಕಾಗಿ ಅಂಗಲಾಚುತ್ತಿರುವ ದೃಶ್ಯವೂ ವಿಡಿಯದಲ್ಲಿದೆ. ಶಿಯಾ ಸಮುದಾಯದವರ ಅಶೌರಾ ಹಬ್ಬದ ನಿಮಿತ್ತ ಮೆರವಣಿಗೆ ನಡೆಯುತ್ತಿತ್ತು.
PublicNext
19/08/2021 09:09 pm