ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಶ್ವ ವಿಖ್ಯಾತ ಪ್ಯಾರಿಸ್‌ನ ಐಫೆಲ್ ಟವರ್‌ಗೆ ಬಾಂಬ್ ಬೆದರಿಕೆ ಕರೆ

ಪ್ಯಾರಿಸ್: ವಿಶ್ವ ವಿಖ್ಯಾತ ಐಫೆಲ್ ಪ್ಯಾರಿಸ್‌ನ ಟವರ್ ನಲ್ಲಿ ಬಾಂಬ್ ಇಟ್ಟಿರುವುದಾಗಿ ಅನಾಮಧೇಯ ವ್ಯಕ್ತಿಯೊಬ್ಬ ದೂರವಾಣಿ ಕರೆ ಮಾಡಿ ಬೆದರಿಸಿದ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಫ್ರಾನ್ಸ್​ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದು, ಐಫೆಲ್​​ ಟವರ್​ ಪ್ರದೇಶದಲ್ಲಿ ಜನರು ಬರದಂತೆ ಬಿಗಿ ಬಂದೋಬಸ್ತ್​ ಏರ್ಪಡಿಸಲಾಗಿದೆ.

ಬುಧವಾರ ಬೆಳಗ್ಗೆ ಅನಾಮಿಕ ವ್ಯಕ್ತಿ ಕರೆ ಮಾಡಿದ್ದ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದು, ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಐಫೆಲ್ ಟವರ್ ಸ್ಥಳದ ಸುತ್ತ ಮುತ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಬಾಂಬ್​ ನಿಷ್ಕ್ರಿಯದಳ ಶೋಧ ಕಾರ್ಯಾಚಣೆ ನಡೆಸುತ್ತಿದೆ.

ಈ ಹಿಂದೆಯು ಕರೆಗಳು ಬಂದಿದ್ದು, ಹುಸಿ ಕರೆಗಳಾಗಿವೆ. ಆದರೂ ಸುರಕ್ಷತಾ ದೃಷ್ಟಿಯಿಂದ ಕರೆಯನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಈ ಟವರ್ ನ ಉಸ್ತುವಾರಿ ಕಂಪೆನಿಯ ಅಧಿಕಾರಿಯವರು ನೀಡಿರುವ ಮಾಹಿತಿಯನ್ನುದ್ದೇಶಿಸಿ ಇಂಡಿಯಾ ಟುಡೇ ವರದಿ ಮಾಡಿದೆ.

ಸುತ್ತಲಿನ ಪ್ರದೇಶದಲ್ಲಿ ತೀವ್ರ ಶೋಧ ಕಾರ್ಯ ನಡೆಸಿದ್ದು, ಬಾಂಬ್​ ಬೆದರಿಕೆ ಹಿನ್ನೆಲೆ ಸದ್ಯ ಐಫೆಲ್​ ಟವರ್​ ವೀಕ್ಷಣೆಯನ್ನು ರದ್ದು ಮಾಡಲಾಗಿದೆ.

Edited By :
PublicNext

PublicNext

23/09/2020 07:42 pm

Cinque Terre

105.31 K

Cinque Terre

0