ಅಮೇರಿಕಾ: ಲ್ಯಾಂಡಿಂಗ್ ಆದ ವಿಮಾನದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಬಂದಿದ್ದರಿಂದ ಸುಮಾರು 126 ಜನ ಪ್ರಯಾಣಿಕರ ಪ್ರಾಣ ಉಳಿದಿದೆ. ಅಮೆರಿಕದ ಮಿಯಾಮಿ ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ರನ್‌ವೇ ಸಮೀಪ ಬರುತ್ತಿದ್ದಂತೆ ವಿಮಾನ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಭಾರಿ ದುರಂತ ತಪ್ಪಿದಂತಾಗಿದೆ.
ಡೊಮಿನಿಕನ್ ಗಣರಾಜ್ಯದ ಲಾಸ್ ಅಮೆರಿಕಾಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಫ್ಲೋರಿಡಾದ ಮಿಯಾಮಿಗೆ ಹೋಗುವ ರೆಡ್ ಏರ್ ವಿಮಾನದಲ್ಲಿ 126 ಜನರು ಇದ್ದರು. ಮಿಯಾಮಿ-ಡೇಡ್ ಏವಿಯೇಷನ್ ಡಿಪಾರ್ಟ್ಮೆಂಟ್ ಸಂವಹನ ನಿರ್ದೇಶಕ ಗ್ರೆಗ್ ಚಿನ್, ಕ್ರ್ಯಾಶ್ ಲ್ಯಾಂಡಿಂಗ್ ಮತ್ತು ನಂತರದ ಬೆಂಕಿಯಿಂದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಉಳಿದ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಟರ್ಮಿನಲ್‌ಗೆ ಕರೆದೊಯ್ಯಲಾಯಿತು.
ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾದ ವೀಡಿಯೊದಲ್ಲಿ ವಿಮಾನದ ರೆಕ್ಕೆಯ ಬಳಿಯಿಂದ ಜ್ವಾಲೆಗಳು ಮತ್ತು ಹೊಗೆ ಹೊರಬರುತ್ತಿರುವುದನ್ನು ತೋರಿಸುತ್ತದೆ. ಮಿಯಾಮಿ-ಡೇಡ್ ಫೈರ್ ರೆಸ್ಕ್ಯೂನ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಲು ಕಾರ್ಯ ನಡೆಸಿದ್ದಾರೆ ಈ ಅಘಾತಕಾರಿ ವಿಡಿಯೋ ಭಾರಿ ಬೆಚ್ಚಿ ಬೀಳಿಸುವಂತಿದೆ.
PublicNext
22/06/2022 04:15 pm