ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಲಿವುಡ್ ಯುಟ್ಯೂಬ್ ಸ್ಟಾರ್ ಧರಿಸಿದ ವಜ್ರದ ನೆಕ್ಲೆಸ್ ಯಾರದ್ದು ಗೊತ್ತೇ ?

ನ್ಯೂಯಾರ್ಕ: ನಮ್ಮ ದೇಶದ ಆ ಒಂದು ಅಮೂಲ್ಯ ನೆಕ್ಲೆಸ್ ಈಗ ಪತ್ತೆ ಆಗಿದೆ. ಅದು ಒಬ್ಬ ಹಾಲಿವುಡ್ ಅಮೆರಿಕದ ಯುಟ್ಯೂಬ್ ಸ್ಟಾರ್ ಕೊರಳಲ್ಲಿ ಅನ್ನೋದೇ ಸತ್ಯ. ಮೊನ್ನೆ ನಡೆದ ಮೆಟ್ ಗಾಲಾ ಫ್ಯಾಷನ್ ಹಬ್ಬದಲ್ಲಿ ಯುಟ್ಯೂಬ್ ಸ್ಟಾರ್ ಈ ಅಪರೂಪದ ವಜ್ರದ ನೆಕ್ಲೆಸ್ ಧರಿಸಿ ಗಮನ ಸೆಳೆದಿದ್ದಾರೆ. ಅದುವೇ ಈಗ ವಿವಾದಕ್ಕೂ ಕಾರಣ ಆಗಿದೆ.

ಪಟಿಯಾಲದ ಮಹಾರಾಜ ಭೂಪಿಂದರ್ ಸಿಂಗ್ 1928 ರಲ್ಲಿ ಈ ನೆಕ್ಲೆಸ್ ಧರಿಸಿದ್ದರು.ಇವರಾದ್ಮೇಲೆ ಇವರ ಪುತ್ರ ಯದವಿಂದ್ರ ಸಿಂಗ್ 1948 ರಲ್ಲಿ ಈ ನೆಕ್ಲೆಸ್ ಧರಿಸಿಕೊಂಡಿದ್ದರು.ಆದರೆ, ಆ ಬಳಿಕ ಈ ನೆಕ್ಲೆಸ್ ಕಳ್ಳತನವಾಗಿ ಬಿಟ್ಟಿದೆ.

ಆದರೆ, ಈಗ ಇದೇ ನೆಕ್ಲೆಸ್ ಯುಟ್ಯೂಬ್ ಸ್ಟಾರ್ ಎಮ್ಮಾ ಚೆಂಬರ್ಲೆನ್ ಧರಿಸಿಕೊಂಡಿದ್ದಾರೆ. ಮೆಟ್ ಗಾಲಾ ಫ್ಯಾಷನ್ ಹಬ್ಬದಲ್ಲಿಯೇ ಈ ನೆಕ್ಲೆಸ್ ಧರಸಿಕೊಂಡು ಕಂಗೊಳಿಸಿದ್ದಾರೆ. ಆದರೆ, ಇದು ಓರಿಜನಲ್ ನೆಕ್ಲೆಸ್ಸಾ..? ಇಲ್ಲವೇ ನಕಲಿನಾ ..? ಇದಾವುದು ಗೊತ್ತಿಲ್ಲ.

ಆದರೆ, ಭಾರತೀಯರು ಇದನ್ನ ಕಂಡು ಇದು ನಮ್ಮ ದೇಶದ ನೆಕ್ಲೆಸ್ ಅಂತಲೇ ಹೇಳ್ತಿದ್ದಾರೆ. ರಾಜ ಭೂಪಿಂದರ್ ಸಿಂಗ್ ಧರಿಸಿದ ನೆಕ್ಲೆಸ್‌ನ ಆ ಫೋಟೋ ಹಾಗೂ ನೆಕ್ಲೆಸ್ ಧರಿಸಿ ಪೋಸ್ ಕೊಟ್ಟ ಯುಟ್ಯೂಬ್ ಸ್ಟಾರ್ ಈಗೀನ ಎರಡೂ ಫೋಟೋಗಳನ್ನ ಹೋಲಿಸಿ ತಮ್ಮ ಆಕ್ರೋಶವನ್ನೂ ಈಗ ಹೊರಗೆ ಹಾಕುತ್ತಿದ್ದಾರೆ.

Edited By :
PublicNext

PublicNext

10/05/2022 04:07 pm

Cinque Terre

60.47 K

Cinque Terre

2

ಸಂಬಂಧಿತ ಸುದ್ದಿ