ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆತ್ಮಗಳ ಜೊತೆ ಮಾತಾಡ್ತೀನಿ ಎಂದು ನಾಪತ್ತೆಯಾದ ಬಾಲಕಿ: ಸಿಲಿಕಾನ್ ಸಿಟಿಯಲ್ಲಿ ವಿಚಿತ್ರ ಕೇಸ್

ಬೆಂಗಳೂರು: ನಾನು ಆತ್ಮಗಳ ಜೊತೆ ಮಾತಾಡ್ತೀನಿ ಎಂದು ಹೇಳುತ್ತ ವಿಚಿತ್ರವಾಗಿ ವರ್ತಿಸುತ್ತಿದ್ದ ಬಾಲಕಿ ಮನೆಯಿಂದ ಇದ್ದಕ್ಕಿಂದ್ದಂತೆ ನಾಪತ್ತೆಯಾಗಿದ್ದಾಳೆ. ಇಂತದ್ದೊಂದು ಅಚ್ಚರಿಯ ಪ್ರಕರಣ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಸುಬ್ರಹ್ಮಣ್ಯನಗರದ ಅಪ್ರಾಪ್ತ ಬಾಲಕಿಯೋರ್ವಳು ನಾಪತ್ತೆಯಾಗಿದ್ದು ಪೋಷಕರು ಆತಂಕದಲ್ಲಿದ್ದಾರೆ. ಕಳೆದ ಹಲವಾರು ದಿನಗಳಿಂದ ಬಾಲಕಿ ಮನೆಯಲ್ಲಿ ಒಬ್ಬಳೇ ಮಾತಾಡಿಕೊಳ್ಳೋದು ಸೇರಿದಂತೆ ಅಸಹಜ ನಡೆವಳಿಕೆಯಿಂದ ವರ್ತಿಸುತ್ತಿದ್ದಳು. ಇದರಿಂದ ಪೋಷಕರು ಚಿಂತಾಕ್ರಾಂತರಾಗಿದ್ದಾರೆ. 'ನನ್ನ ಮಗಳು ಮಾನಸಿಕ-ದೈಹಿಕವಾಗಿ ಆರೋಗ್ಯವಾಗಿಯೇ ಇದ್ದಳು. ಸ್ಥಳೀಯ ಕಾಲೇಜೊಂದರಲ್ಲಿ ಓದುತ್ತಿದ್ದಳು. ಆಕೆಗೆ ಯಾರೋ ಹಿಪ್ನೋಟಿಸಂ ಮಾಡಿಸಿದ್ದಾರೆ. ಎಂದು ಬಾಲಕಿಯ ತಂದೆ ಹೇಳಿದ್ದಾರೆ.

ಸದ್ಯ ಕೈಯಲ್ಲಿ ಎರಡೂವರೆ ಸಾವಿರ ನಗದು ಹಾಗೂ ಎರಡು ಜತೆ ಬಟ್ಟೆ ಇರುವ ಬ್ಯಾಗ್ ಹಿಡಿದು ಬಾಲಕಿ ಹೊರಟಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೇ ಮಹತ್ವದ ಸುಳಿವಿನ ಜಾಡು ಹಿಡಿದು ಪೊಲೀಸರು ಬಾಲಕಿಯ ಪತ್ತೆಗಾಗಿ ಜಾಲಾಡುತ್ತಿದ್ದಾರೆ. ಆದ್ರೆ ಇತ್ತ ಹೆತ್ತ ಕರಳು ಮಮ್ಮಲ ಮರಗುತ್ತಿದೆ. ಮಗಳೇ ನೀ ಎಲ್ಲಿದ್ದರೂ ಮನೆಗೆ ಬಂದು ಬಿಡು ಸಾಕು ಎಂದ ಬಾಲಕಿಯ ತಾಯಿ ಕಣ್ಣೀರಿಡುತ್ತಿದ್ದಾರೆ.

Edited By : Nagesh Gaonkar
PublicNext

PublicNext

31/12/2021 11:01 pm

Cinque Terre

94.62 K

Cinque Terre

4