ಭಟ್ಕಳ : ಕಳೆದೆರಡು ವರ್ಷಗಳಿಂದ ಈಕೆ ಅನುಭವಿಸುತ್ತಿರುವ ಕಷ್ಟಗಳು ಅಷ್ಟಿಷ್ಟಲ್ಲ ಪಾಪಿ ಪತಿ ಮತ್ತು ಅತ್ತಿಗೆ ನೀಡಿದ ಹಿಂಸೆಯನ್ನು ತಾಳಿಕೊಂಡು ಈ ಜೀವ ಬದುಕಿರುವುದೇ ಹೆಚ್ಚು..
ಹೌದು ವಿವಾಹಿತ ಮಹಿಳೆಯೋರ್ವಳಿಗೆ ಸತತ ಎರಡು ವರ್ಷಗಳಿಂದ ದೈಹಿಕ ಮತ್ತು ಮಾನಸಿಕ ಚಿತ್ರಹಿಂಸೆ ನೀಡುತ್ತಿರುವ ಘಟನೆ ಬೆಳಕಿಗೆ ಸದ್ಯ ಬೆಂಗಳೂರು ಪೊಲೀಸರ ಸಹಾಯದಿಂದ ಮಹಿಳೆಗೆ ಭಟ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹೌದು ಭಟ್ಕಳ ತಾಲೂಕಿನ ಕುಂಟುವಾಣಿ ನಿವಾಸಿ ಸುಧಾ ಶೆಟ್ಟಿ ಸಂತ್ರಸ್ತ ಮಹಿಳೆ. 2015ರಲ್ಲಿ ಕುಂದಾಪುರದ ಬಡಾಕೆರೆ ನಿವಾಸಿ ನರಸಿಂಹ ಗಾಣಿಗ ಎಂಬುವವನಿಗೆ ಈಕೆಯನ್ನು ಕೊಟ್ಟು ಮದುವೆ ಮಾಡಲಾಗಿತ್ತು. ಅಲ್ಲೇ ನಾಲ್ಕು ವರ್ಷದಿಂದ ವಾಸವಿದ್ದ ಇವರು ಇತ್ತಿಚ್ಚೆಗೆ ಗಂಡ ಹೋಟೆಲ್ ವೊಂದರಲ್ಲಿ ಕೆಲಸ ಮಾಡಲು ಬೆಂಗಳೂರಿಗೆ ಹೋಗುವಾಗ ಹೆಂಡತಿಯನ್ನು ಜೊತೆಗೆ ಕರೆದುಕೊಂಡು ಹೋಗಿ ಜೀವನ ನಡೆಸುತ್ತಿದ್ದ. ಇವರ ಜೊತೆಗೆ ಗಂಡನ ತಂಗಿ ನೇತ್ರಾವತಿಯೂ ವಾಸವಾಗಿದ್ದಳು.
ಇನ್ನು ಮನೆಯಲ್ಲಿದ್ದ ನೇತ್ರಾವತಿ ಅಣ್ಣನಿಲ್ಲದ ಸಂದರ್ಭದಲ್ಲಿ ಸುಧಾಗೆ ಕಾದ ಕಬ್ಬಿಣದ ಸಲಾಖೆಯಿಂದ ಮೈಯಲ್ಲಾ ಸುಟ್ಟಿದ್ದಾರೆ. ಈ ಚಿತ್ರಹಿಂಸೆಯಿಂದ ತಪ್ಪಿಸಿಕೊಂಡ ಸುಧಾಳನ್ನು ಸ್ಥಳೀಯರು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ದೊರೆತ್ತಿದ್ದು ಪ್ರಕರಣ ಬೆಳಕಿಗೆ ಬಂದಿದೆ.
ಸದ್ಯ ಪತಿ ಹಾಗೂ ಅತಿಗೆ ವಿರುದ್ಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದ್ದು ಇವರಿಬ್ಬರ ಬಂಧನವಾಗಿದೆ.
PublicNext
16/08/2021 10:08 pm