ವೈದ್ಯರ ನಿರ್ಲಕ್ಷ್ಯೆಯಿಂದ ಬಾಣಂತಿ ಮೃತಪಟ್ಟಿದೆ ಎಂಬ ಆರೋಪ ಕೇಳಿ ಬಂದಿದೆ. ಕುಣಿಗಲ್ ತಾಲೂಕಿನ ತೆರೆದಕುಪ್ಪೆ ಗ್ರಾಮಸ್ಥರು ಸರ್ಕಾರಿ ಆಸ್ಪತ್ರೆ ಎದುರು ಶವ ಇಟ್ಟು ಪ್ರತಿಭಟನೆ ನಡೆಸಿ ಆಸ್ಪತ್ರೆ ಆಡಳಿತಾಧಿಕಾರಿ ಗಣೇಶ್ ಬಾಬು ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಶನಿವಾರ ನಡೆಯಿತು.
ತಾಲೂಕಿನ ಕೊತ್ತಗೆರೆ ಹೋಬಳಿ ತೆರೆದಕುಪ್ಪೆ ಗ್ರಾಮದ ಮಹಿಳೆ ಪಲ್ಲವಿ (21) ಮೃತ ಬಾಣಂತಿ. ಜುಲೈ 6 ರಂದು ಪಲ್ಲವಿಯನ್ನು ಪೋಷಕರು ಹೆರಿಗೆಗೆಂದು ಸರ್ಕಾರಿ ಆಸ್ಪತ್ರೆ ಗೆ ದಾಖಲಿಸುತ್ತಾರೆ ಆದರೆ ಇಲ್ಲಿನ ವೈದ್ಯ ಹರೀಶ್ ಹಣ ನೀಡದರೇ ಹೆರಿಗೆ ಮಾಡುತ್ತೇನೆ, ಇಲ್ಲವಾದರೆ ಹೆರಿಗೆ ಮಾಡುವುದಿಲ್ಲ ಎಂದು ಪೊಷಕರನ್ನು ಒತ್ತಾಯಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಪಲ್ಲವಿಯ ಪತಿ ಲೋಕೇಶ್ ಹಣ ತಂದು ಕೊಟ್ಟ ಮೇಲೆ ಬಾಣತಿಗೆ ನಾರ್ಮಲ್ ಹೆರಿಗೆಯಾಗುವುದಿಲ್ಲ ಸಿಜರಿನ್ ಹೆರಿಗೆ ಮಾಡುತ್ತೇನೆ ಎಂದು ಸಿಜರಿನ್ ಹೆರಿಗೆ ಮಾಡಿದ್ದಾರೆ ಈ ವೇಳೆ ಹೆಚ್ಚು ರಕ್ತಸ್ರಾವವಾಗಿ ಬಾಣಂತಿ ಅಸ್ತವ್ಯಸ್ತವಾದಾಗ ವೈದ್ಯ ಹರೀಶ್ ಸೇರಿದಂತೆ ಮೂರು ಮಂದಿ ವೈದ್ಯರು ಬಾಣತಿಯನ್ನು ಅವರೇ ಕರೆದುಕೊಂಡು ಹೋಗಿ ಆದಿಚುಂಚನಗಿರಿ ಆಸ್ಪತ್ರೆ ದಾಖಲಿಸಿದ್ದಾರೆ ಅಲ್ಲಿಂದ ಬೆಂಗಳೂರಿನ ಕೆಂಗೇರಿ ಆಸ್ಪತ್ರೆಗೆ ದಾಖಲಿಸಿ ಅಲ್ಲಿ ಪಲ್ಲವಿ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಮೃತಪಟ್ಟಿದೆ. ಇದಕ್ಕೆ ವೈದ್ಯರೇ ನೇರ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.
ಆಕ್ರೋಶ ಗಂಡ ಪಲ್ಲವಿಯ ಪೋಷಕರು ಆಸ್ಪತ್ರೆ ಒಳಗೆ ನುಗ್ಗಿ ದಾಂಧಲೆಗೆ ಯತ್ನಿಸಿದರು. ಪೊಲೀಸರು ಮಧ್ಯ ಪ್ರವೇಶಿಸಿ ಅನಾಹುತವನ್ನು ತಪ್ಪಿಸಿದ್ದು ಒಟ್ಟಾರೆ ವೈದ್ಯರ ನಿರ್ಲಕ್ಷದ ಅಥವಾ ಗೃಹಿಣಿಯ ಸಂಬಂಧಿಕರು ನಿರ್ಲಕ್ಷವೂ ಇನ್ನೂ ಬದುಕಿ ಬಾಳಬೇಕಾದ ಗೃಹಿಣಿ ಸಾವನ್ನಪ್ಪಿದ್ದಾರೆ ಎನ್ನುವ ಮಾತುಗಳು ಎಲ್ಲೆಡೆ ಕೇಳಿಬರುತ್ತಿದೆ.
PublicNext
30/07/2022 06:50 pm