ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಸರ್ಕಾರಿ ಪ್ರೌಢಶಾಲೆಯ ಧ್ವಜಸ್ತಂಭ ಧ್ವಂಸ !

ಕೊರಟಗೆರೆ: ತಾಲೂಕು ಹೊಳವನಹಳ್ಳಿ ಸರ್ಕಾರಿ ಪ್ರೌಢಶಾಲೆ (ಕೆಪಿಎಸ್) ಶಾಲೆಯ ಅವರಣದಲಿದ್ದಂತ ಧ್ವಜ ಸ್ತಂಭವನ್ನ ಕಿಡಿಗೇಡಿಗಳು ಭಾನುವಾರ ರಾತ್ರಿ ಧ್ವಂಸಗೊಳಿಸಿ ಧ್ವಜಸ್ತಂಭದಲ್ಲಿದ್ದ ಕಬ್ಬಿಣದ ಫೋಲ್ ಮುರಿದು ತೆಗೆದುಕೊಂಡು ಹೋದ ಘಟನೆ ನಡೆದಿದೆ.

ಕೊರಟಗೆರೆ ತಾಲೂಕಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೊಳವನಹಳ್ಳಿ ಹೋಬಳಿ ಕೇಂದ್ರದಲ್ಲಿ ಘಟನೆ ನಡೆದಿದೆ.

ಹೊಳವನಹಳ್ಳಿ ಉಪ ಪೊಲೀಸ್ ಠಾಣಾ ವ್ಯಾಪ್ತಿಯ ಎಎಸ್ಐ ಮಂಜುನಾಥ್ ರವರಿಗೆ ಇತ್ತೀಚೆಗೆ ಶಾಲೆಯಲ್ಲಿ ಪ್ರಾಂಶುಪಾಲರು ಪುಂಡರ ಕಾಟ ಇದೆ ಎಂದು ಮನವಿಯನ್ನು ಮಾಡಿದ್ದರು.

ಪೋಲಿಸ್ ಸಿಬ್ಬಂದಿಗಳು ಸಂಜೆ 6 ರಿಂದ ರಾತ್ರಿ 12 ರ ವರೆಗೂ ಗಸ್ತು ತಿರುಗುತ್ತಿದ್ದ ಕಾರಣ ಯಾವ ಪುಂಡರು ಇತ್ತಾ ಸುಳಿಯುತ್ತಿರಲಿಲ್ಲ. ಆದರೆ ಭಾನುವಾರ ರಾತ್ರಿ ಸಿಬ್ಬಂದಿಗಳು ಬೇರೆ ನಿಯೋಜನೆಗೊಂಡ ಹಿನ್ನೆಲೆಯಲ್ಲಿ ಇದನ್ನು ಅವಕಾಶ ಮಾಡಿಕೊಂಡ ಕಿಡಿಗೇಡಿಗಳು, ಕಬ್ಬಿಣದ ಪೋಲನ್ನು ಕಸಿದುಕೊಳ್ಳಲು ಧ್ವಜಸ್ತಂಭವನ್ನು ಧ್ವಂಸ ಮಾಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕಾಲೇಜಿನ ಪ್ರಾಂಶುಪಾಲ ಕೆ.ಎಸ್.ಈರಣ್ಣ ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Edited By :
PublicNext

PublicNext

11/07/2022 03:26 pm

Cinque Terre

52.25 K

Cinque Terre

0