ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾಠ ಹೇಳೋದು ಬಿಟ್ಟು ಮಕ್ಕಳ ಮತಾಂತರಕ್ಕೆ ಯತ್ನಿಸಿದ ಶಿಕ್ಷಕ ಸಸ್ಪೆಂಡ್

ಕನ್ಯಾಕುಮಾರಿ: ಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳೋದು ಬಿಟ್ಟು ಕ್ರಿಶ್ಚಿಯನ್ ಪ್ರಾರ್ಥನೆ ಓದಿಸುತ್ತಿದ್ದ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ‌.

ತಮಿಳುನಾಡಿನ ಕನ್ಯಾಕುಮಾರಿ ಸಮೀಪದ ಕನ್ನಟ್ಟುವಿಲೈ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮತಾಂತರಕ್ಕೆ ಯತ್ನಿಸಿದ ಘಟನೆ ನಡೆದಿದೆ‌. ಪ್ರಾರ್ಥನೆ ಓದಿಸಿದ್ದೂ ಅಲ್ಲದೇ ಮಕ್ಕಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳಲು ಹೇಳುತ್ತಿದ್ದ ಹೊಲಿಗೆ ವಿಷಯದ ಶಿಕ್ಷಕನ ಬಗ್ಗೆ ಮಕ್ಕಳು ಪಾಲಕರಿಗೆ ದೂರಿವೆ.

ನಂತರ ಶಾಲೆಗೆ ಭೇಟಿ ಕೊಟ್ಟ ಪೊಲೀಸರು ವಿಚಾರಣೆ ನಡೆಸಿ ಮಕ್ಕಳ ಹೇಳಿಕೆ ಪಡೆದಿದ್ದಾರೆ. ಮುಖ್ಯ ಶಿಕ್ಷಕರಿಗೂ ಪಾಲಕರು ಈ ಬಗ್ಗೆ ದೂರು ನೀಡಿದ್ದಾರೆ. ಶಿಕ್ಷಣಾಧಿಕಾರಿಗಳು ಮತಾಂತರಿ ಶಿಕ್ಷಕನನ್ನು ಅಮಾನತಿನಲ್ಲಿ ಇರಿಸಿದ್ದಾರೆ.

Edited By : Nagaraj Tulugeri
PublicNext

PublicNext

13/04/2022 09:30 pm

Cinque Terre

75.66 K

Cinque Terre

24