ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು:ಅನಧಿಕೃತ ಗೈರು ಹಾಜರು-ಕರ್ತವ್ಯಲೋಪ:ಇಬ್ಬರು ಶಿಕ್ಷಕರು ಅಮಾನತು!

ಮಧುಗಿರಿ: ನಿರಂತರವಾಗಿ ಗೈರು ಹಾಜರಾಗುತ್ತಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಇಬ್ಬರು ಶಿಕ್ಷಕರನ್ನು ಡಿಡಿಪಿಐ ಎಂ.ರೇವಣಸಿದ್ದಪ್ಪ ಗುರುವಾರ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಮಧುಗಿರಿ ತಾಲೂಕಿನ ಪುರವರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಸಿ.ಮಂಜುನಾಥ್ ಮತ್ತು ಸಜ್ಜೆ ಹೊಸಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಟಿ.ಎಸ್.ಸಿದ್ದೇಶ್ವರ್ ಅಮಾನತುಗೊಂಡ ಶಿಕ್ಷಕರು.

ಪುರವರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಸಿ.ಮಂಜುನಾಥ್ ಇವರು 2018 ರಿಂದ 2022 ಅವಧಿಯಲ್ಲಿ 74 ದಿನ ಕಾಲ ಪದೇ ಪದೇ ಗೈರು ಹಾಜರಾಗಿದ್ದರು.

ಇನ್ನು ಸಜ್ಜೆ ಹೊಸಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಟಿ.ಎಸ್. ಸಿದ್ದೇಶ್ವರ್ ಇವರೂ ಸಹ 2022 ರ ಮೇ 17 ರಿಂದ ಇಲ್ಲಿಯವರೆಗೂ ನಿರಂತರ ವಾಗಿ ಗೈರುಹಾಜರಾಗಿದ್ದಾರೆ.

ಇಬ್ಬರೂ ಶಿಕ್ಷಕರ ಗೈರು ಹಾಜರಿ ಬಗ್ಗೆ ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಣ ಸಂಯೋಜಕರು ಮತ್ತು ಸಿ.ಆರ್.ಪಿ. ಗಳು ಡಿಪಿಪಿಐ ಕಚೇರಿಗೆ ವರದಿ ಸಲ್ಲಿಸಿದ್ದರು. ಸದರಿ ಶಿಕ್ಷಕರು ಪದೇ ಪದೇ ಗೈರು ಹಾಜರಾಗುತ್ತಿರುವ ಹಿನ್ನೆಲೆಯಲ್ಲಿ ಶಾಲೆಯ ಮಕ್ಕಳ ಶೈಕ್ಷಣಿಕ ಅಭಿವೃದ್ದಿಯ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವುದರ ಜೊತೆಗೆ ಮಕ್ಕಳ ಕಲಿಕೆಯ ಮೇಲೆ ಕೆಟ್ಟ ಪರಿಮಾಣ ಬೀರುತ್ತಿರುವ ಹಿನ್ನೆಲೆಯಲ್ಲಿ ಇವರ ಮೇಲಿನ ವಿಚಾರಣೆಯನ್ನು ಕಾಯ್ದಿರಿಸಿ ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಡಿಡಿಪಿಐ ನಡೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

Edited By :
PublicNext

PublicNext

21/07/2022 08:44 pm

Cinque Terre

29.95 K

Cinque Terre

1