ಕೋಲ್ಕತ್ತಾ: ಪಶ್ಚಿಮ ಬಂಗಾಳದ ಜನಪ್ರಿಯ ಕಿರುತೆರೆ ನಟಿ ಪಲ್ಲವಿ ಡೇ ಅವರ ಮೃತದೇಹ ದಕ್ಷಿಣ ಕೋಲ್ಕತ್ತಾದ ಅಪಾರ್ಟ್ಮೆಂಟ್ನಲ್ಲಿಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಮೊನ್ ಮನೆ ನಾ' ಸೀರಿಯಲ್‌ನ ಜನಪ್ರಿಯ ನಟಿ ಪಲ್ಲವಿ ಡೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂದು ಬೆಳಿಗ್ಗೆ ನೇಣು ಬಿಗಿದ ಸ್ಥಿತಿ ಶವ ಪತ್ತೆಯಾಗಿದ್ದು, ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದು ಪಲ್ಲವಿ ನೇಣು ಹಾಕಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ನಟಿಯ ಸಾವಿಗೆ ಕಾರಣವೇನು ಎಂಬುದು ತಿಳಿದು ಬಂದಿಲ್ಲ. ನಟಿ ಅಸಹಜ ಸಾವಿಗೆ ಬಂಗಾಳದ ಪೊಲೀಸರು ಪ್ರಕರಣ ದಾಖಾಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಪಲ್ಲವಿ ಅವರು ಏಪ್ರಿಲ್‌ನಲ್ಲಿ ದಕ್ಷಿಣ ಕೋಲ್ಕತ್ತಾದ ಗಾರ್ಫಾ ಪ್ರದೇಶದಲ್ಲಿ ಅಪಾರ್ಟ್ಮೆಂಟ್ ಅನ್ನು ಬಾಡಿಗೆಗೆ ಪಡೆದಿದ್ದರು ಎನ್ನಲಾಗುತ್ತಿದೆ. ತಮ್ಮ ಗೆಳೆಯನ ಜೊತೆ ವಾಸವಿದ್ದರು. ಸುದ್ದಿಗಾರರಿಗೆ ಮಾಹಿತಿ ನೀಡಿರುವ ಅಪಾರ್ಟ್‌ಮೆಂಟ್‌ನ ಕೇರ್‌ಟೇಕರ್, ಮಲಗುವ ಕೋಣೆಯಲ್ಲಿ ಅವರು ನೇಣು ಬಿಗಿದುಕೊಂಡಿದ್ದಾಳೆ ಎಂದು ತಿಳಿದ ತಕ್ಷಣ ಅವರ ಗೆಳೆಯ ನನ್ನನ್ನು ಜೋರಾಗಿ ಕೂಗಿ ಕರೆದರು. ನಂತರ ಇತರೆ ಮನೆಗೆಲಸದ ಸಿಬ್ಬಂದಿಯೊಂದಿಗೆ ಪಲ್ಲಬಿ ಅವರ ಶವವನ್ನು ಕೆಳಗೆ ಇಳಿಸಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು ಎಂದು ತಿಳಿಸಿದರು.
PublicNext
15/05/2022 06:14 pm