ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಗಿಣಿ, ಸಂಜನಾಗೆ ಮತ್ತೆ ಸಂಕಷ್ಟ: ಎಫ್‌ಎಸ್‌ಎಲ್‌ ವರದಿಯಲ್ಲಿ ಏನಿದೆ?

ಬೆಂಗಳೂರು: ಸ್ಯಾಂಡಲ್‍ವುಡ್ ನಟಿಯರಾದ ಸಂಜನಾ ಗಲ್ರಾನಿ ಹಾಗೂ ರಾಗಿಣಿ ದ್ವಿವೇದಿ ಅವರಿಗೆ ಡ್ರಗ್ಸ್‌ ಸೇವನೆ ಕೇಸ್‌ನಲ್ಲಿ ಮತ್ತೆ ಸಂಕಷ್ಟ ಶುರುವಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ(ಎಫ್‍ಎಸ್‍ಎಲ್) ವರದಿಯಲ್ಲಿ ನಟಿಯರು ಡ್ರಗ್ಸ್‌ ಸೇವಿಸಿರುವುದು ಸಾಬೀತಾಗಿದೆ.

ನಟಿಯರ ಮನೆಯಲ್ಲಿ ಸಿಕ್ಕ ವಸ್ತುಗಳಲ್ಲಿ, ಹೇರ್‌ ಫೋಲಿಕಲ್ ಟೆಸ್ಟ್‌ನಲ್ಲಿ ಡ್ರಗ್ಸ್ ಅಂಶ ಸಾಬೀತಾಗಿದೆ. ಇದರ ಆರೋಪಿಗಳ ಮಧ್ಯೆ ಹಣ ವರ್ಗಾವಣೆಯಾಗಿದ್ದಕ್ಕೆ ಬ್ಯಾಂಕ್‌ ಸ್ಟೇಟ್‌ಮೆಂಟ್‌ ದಾಖಲೆಗಳನ್ನು ಸಲ್ಲಿಸಲಾಗಿದೆ.

ಸಿಸಿಬಿ ಅಧಿಕಾರಿಗಳು ಎಫ್‌ಎಸ್‌ಎಲ್‌ ವರದಿ ಆಧಾರಿಸಿ ಆರೋಪಿಗಳ ವಿರುದ್ಧ 2,500 ಪುಟಗಳ ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಹೈಕೋರ್ಟ್‌ಗೆ ಸಲ್ಲಿಸಿರುವ ಹೆಚ್ಚುವರಿ ಚಾರ್ಜ್‌ಶೀಟ್‌ನಲ್ಲಿ ಡ್ರಗ್ ಪೆಡ್ಲರ್ ಲೂಮ್ ಪೆಪ್ಪರ್ ಜೊತೆ ನಟಿಯರು ನೇರ ಸಂಪರ್ಕ ಹೊಂದಿರುವ ಬಗ್ಗೆಯೂ ಉಲ್ಲೇಖವಾಗಿದೆ.

Edited By : Vijay Kumar
PublicNext

PublicNext

26/10/2021 09:52 pm

Cinque Terre

69.47 K

Cinque Terre

4

ಸಂಬಂಧಿತ ಸುದ್ದಿ