ಮುಂಬೈ: ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್ ಈಗ ಜೈಲ್ ನಲ್ಲಿ ಏನು ಮಾಡುತ್ತಿದ್ದಾರೆ ಅನ್ನೋ ಪ್ರಶ್ನೆ ಸಹಜವಾಗಿಯೇ ಎಲ್ಲರಲ್ಲೂ ಮೂಡುತ್ತಿದೆ. ಅದಕ್ಕೆ ಉತ್ತರವಾಗಿ ನಮ್ಮ ಬಳಿ ಒಂದಷ್ಟು ವಿಷಯ ಇದೆ. ಹೇಳ್ತೀವಿ ಓದಿ.
ಆರ್ಯನ್ ಖಾನ್ ಜಾಮೀನು ಸಿಗದೆ ಕಂಗಾಲಾಗಿದ್ದಾನೆ. ಆದರೆ ಅದನ್ನ ಹೋಗಲಾಡಿಸಲು ಪುಸ್ತಕದ ಮೊರೆ ಹೋಗಿದ್ದಾನೆ. 'ದಿ ಲಯನ್ಸ್ ಗೇಟ್' ಪುಸ್ತಕ ಓದಿ ಮುಗಿಸಿರೋ ಆರ್ಯನ್, ಸದ್ಯ ಮತ್ತೊಂದು ಪುಸ್ತಕ ಓದಲು ಶುರು ಮಾಡಿದ್ದಾನೆ. ಅದು ರಾಮಾಯಣದ ರಾಮ ಮತ್ತು ಸೀತೆಯ ಕುರಿತ ಪುಸ್ತಕವೇ ಆಗಿದೆ. ಆದರೆ ಯಾವ ಪುಸ್ತಕ ಅನ್ನೋದು ಗೊತ್ತಾಗಿಲ್ಲ. ಅಂದ್ಹಾಗೆ ಆರ್ಥರ್ ರೋಡ್ ಜೈನಲ್ಲಿರೋ ಆರ್ಯನ್ ಖಾನ್, ತುಂಬಾ ಖಿನ್ನತೆಗೆ ಒಳಗಾಗಿದ್ದಾನೆ. ಅದರಿಂದ ಹೊರ ಬರಲು ಇಲ್ಲಿಯ ಅಧಿಕಾರಿಗಳೆ ಪುಸ್ತಕ ಓದು ಅಂತಲೇ ಸಲಹೆ ಕೊಟ್ಟಿದ್ದಾರೆ. ಅದನ್ನೆ ಆರ್ಯನ್ ಈಗ ಫಾಲೋ ಮಾಡ್ತಿರೋದು ಅಷ್ಟೆ.
PublicNext
24/10/2021 05:37 pm