ಬೆಂಗಳೂರು: ಬಹುಭಾಷಾ ನಟಿ ಸಂಜನಾ ಗಲ್ರಾನಿ ಆಪ್ತ ಸ್ನೇಹಿತ ರಾಹುಲ್ ಥೋನ್ಸೆ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಗೋವಾ ಮತ್ತು ಕೊಲಂಬೊದಲ್ಲಿ ಕ್ಯಾಸಿನೊಗಳ ಮ್ಯಾನೇಜಿಂಗ್ ಡೈರೆಕ್ಟರ್ ಆದತಂಹ ರಾಹುಲ್ ಥೋನ್ಸೆ, ಕ್ಯಾಸಿನೊಗಳಲ್ಲಿ ಹಣ ಹೂಡಿಕೆ ಮಾಡಿದ್ರೆ ಲಾಭಗಳಿಸಬಹುದು ಎಂದು ನಟಿಗೆ ಆಮಿಷ ಒಡ್ಡಿದ್ದ. ಅದರಂತೆ ನಟಿ ಸಂಜನಾರಿಂದ ಥೋನ್ಸೆ ತನ್ನ ಬ್ಯಾಂಕ್ ಖಾತೆ ಸೇರಿ ಮೂವರ ಬ್ಯಾಂಕ್ ಖಾತೆಗಳಿಗೆ ಹಣ ಜಮಾಯಿಸಿಕೊಂಡಿದ್ದಾನಂತೆ. ಆದರೆ ಇದೀಗ 3 ವರ್ಷಗಳಿಂದ ಯಾವುದೇ ಲಾಭಾಂಶ ನೀಡದೆ, ಹಣ ವಾಪಸ್ ಕೇಳಿದರೂ ಹಿಂದಿರುಗಿಸುತ್ತಿಲ್ಲ. ಅಷ್ಟೇ ಅಲ್ಲದೆ ಕೊಟ್ಟ ಹಣವನ್ನ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿ ಲಾಭಗಳಿಸಿ ನನ್ನ ಘನತೆಗೆ ಧಕ್ಕೆ ತರುವಂತೆ ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದು ಸಂಜನಾ ದೂರಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ವಿಚಾರಣೆ ನಡೆಸಿದ 4ನೇ ಎಸಿಎಂಎಂ ನ್ಯಾಯಾಲಯವು ಇಂದಿರಾನಗರ ಪೊಲೀಸರಿಗೆ ತನಿಖೆಗೆ ಆದೇಶ ನೀಡಿದೆ. ಕೋರ್ಟ್ ಆದೇಶದಂತೆ ಪೊಲೀಸರು ರಾಹುಲ್ ಥೋನ್ಸೆ ಸೇರಿ ಮೂವರ ವಿರುದ್ಧ ಐಪಿಸಿ 120ಬಿ, 107, 354, 406, 420, 506, ಕಲಂ 34ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜೊತೆಗೆ ತನಿಖೆ ಕೂಡ ಆರಂಭಿಸಿದ್ದಾರೆ.
PublicNext
20/10/2021 09:38 am