ಬೆಂಗಳೂರು: ಡ್ರಗ್ಸ್ ಪ್ರಕರಣವೊಂದರಲ್ಲಿ ಎನ್ಸಿಬಿ ಬಾಲಿವುಡ್ ಬಾದ್ ಶಾ ಶಾರುಖ್ ಪುತ್ರ ಖಾನ್ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ. ಈ ಸಂಬಂಧ ಸೆಲೆಬ್ರಿಟಿಗಳು ಆರ್ಯನ್ ಖಾನ್ ಬೆಂಬಲಿಸಿ ಹೇಳಿಕೆ ನೀಡುತ್ತಿರುವ ಬೆನ್ನಲ್ಲೇ ನಟಿ ಕಂಗನಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರ್ಯನ್ ಬೆಂಬಲಿಸಿ ನಟ ಹೃತಿಕ್ ರೋಷನ್ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಒಂದನ್ನು ಮಾಡಿದ್ದರು.
ಇದಕ್ಕೆ ಪ್ರತಿಯಾಗಿ ನಟಿ ಕಂಗನಾ ರನೌತ್, ತಮ್ಮ ಇನ್ ಸ್ಟಾ ಖಾತೆಯ ಸ್ಟೋರೀಸ್ ನಲ್ಲಿ, ಬಾಲಿವುಡ್ ಮಾಫಿಯಾ ಈಗ ಆರ್ಯನ್ ಸಮರ್ಥನೆಗೆ ಇಳಿದಿದೆ. ನಾವು ತಪ್ಪು ಮಾಡಿದಾಗ ಅದನ್ನು ತಿದ್ದಬೇಕೇ ಹೊರತು ಸಮರ್ಥಿಸಿಕೊಳ್ಳಬಾರದು. ಅಪರಾಧವನ್ನು ಬೆಂಬಲಿಸುವುದು ಕೂಡ ಸರಿಯಲ್ಲ ಎಂಬರ್ಥದಲ್ಲಿ ಪೋಸ್ಟ್ ಮಾಡಿದ್ದಾರೆ.
PublicNext
08/10/2021 11:25 am