ಬೆಂಗಳೂರು : 'ಗಂಡ ಹೆಂಡತಿ' ಖ್ಯಾತಿಯ ನಟಿ ಡ್ರಗ್ಸ್ ಸೇವಿಸಿದ್ದು ನಿಜ ಎಂಬುದು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಮೂಲಕ ಸಾಬೀತಾಗಿದೆ. ಸದ್ಯ ಬಂಧನ ಭೀತಿಯಲ್ಲಿರುವ ನಟಿ ಸಂಜನಾ ಅನಾರೋಗ್ಯ ಎಂಬ ಕಾರಣ ಹೇಳಿ ದಿಢೀರನೇ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಕುರಿತಂತೆ ಸುದ್ದಿಗಾರರಿಗೆ ಮಾಹಿತಿ ನೀಡಿರುವಂತ ನಟಿ ಸಂಜನಾ ಗಲ್ರಾಣಿ ತಾಯಿ ರೇಷ್ಮಾ ಗಲ್ರಾಣಿ, ನಮ್ಮ ಹಣೆ ಬರಹ ಸರಿಯಾಗಿಲ್ಲ. ಏನ್ ಮಾಡೋದಕ್ಕೆ ಆಗೋದಿಲ್ಲ. ಸಂಜನಾ ಗಲ್ರಾಣಿಗೆ ಹುಷಾರಿಲ್ಲ. ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ಅವರಿಗೆ ಊಟ ತೆಗೆದುಕೊಂಡು ಬಂದಿದ್ದೇನೆ ಎಂಬುದಾಗಿ ತಿಳಿಸಿದ್ದಾರೆ.
PublicNext
25/08/2021 03:56 pm